ಕರ್ನಾಟಕ

karnataka

ETV Bharat / sitara

ಮತ್ತೆ ಒಂದಾಗಲಿದ್ದಾರೆ ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ - ಶ್ರೀಮುರಳಿ ಜೊತೆ ಪ್ರಶಾಂತ್ ನೀಲ್ ಮತ್ತೊಂದು ಸಿನಿಮಾ

ಕೆಜಿಎಫ್ ಸೀಕ್ವೆಲ್ ಮುಗಿದ ನಂತರ ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ಕಾಂಬಿನೇಷನ್​​ನಲ್ಲಿ ಸಿನಿಮಾ ಬರಲಿದೆಯಂತೆ. 'ಭರಾಟೆ' ಚಿತ್ರದ ಪ್ರೀ ರಿಲೀಸ್ ಸುದ್ದಿಗೋಷ್ಠಿ ಕಾರ್ಯಕ್ರಮದಲ್ಲಿ ರೋರಿಂಗ್ ಸ್ಟಾರ್ ಈ ವಿಷಯ ತಿಳಿಸಿದ್ದಾರೆ.

ಶ್ರೀಮುರಳಿ, ಪ್ರಶಾಂತ್ ನೀಲ್​​

By

Published : Oct 16, 2019, 11:34 PM IST

2014 ರಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಲಿಸ್ಟ್​​ಗೆ ಸೇರಿದ್ದ ಕನ್ನಡ ಸಿನಿಮಾ 'ಉಗ್ರಂ' ನಿರ್ದೇಶನ ಮಾಡಿದ್ದು ಪ್ರಶಾಂತ್ ನೀಲ್. ಚಿತ್ರದಲ್ಲಿ ಶ್ರೀಮುರಳಿ ನಾಯಕನಾಗಿ ನಟಿಸಿದ್ದರು. ಇದೀಗ ಈ ಜೋಡಿ ಮತ್ತೆ ಒಂದಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಶ್ರೀಮುರಳಿ ಮತ್ತೊಂದು ಸಿನಿಮಾ ಮಾಡುತ್ತಿದ್ದಾರಂತೆ.

ಶ್ರೀಮುರಳಿ, ಪ್ರಶಾಂತ್ ನೀಲ್​​

ಚಿತ್ರರಂಗವೇ ಬೇಡ ಎಂದು ದೂರ ಉಳಿದಿದ್ದ ಶ್ರೀಮುರಳಿಗೆ ದೊಡ್ಡ ಬ್ರೇಕ್ ನೀಡಿದ ಸಿನಿಮಾ ಎಂದರೆ ಅದು 'ಉಗ್ರಂ' ಎಂದೇ ಹೇಳಬಹುದು. ಕೆಜಿಎಫ್ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರಾಗಿರುವ ನಿರ್ದೇಶಕ ಪ್ರಶಾಂತ್ ನೀಲ್ ಶ್ರೀಮುರಳಿ ಜೊತೆ ಸಿನಿಮಾ ಮಾಡುವ ಸುಳಿವು ನೀಡಿದ್ದಾರೆ. 'ಭರಾಟೆ' ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಶ್ರೀಮುರಳಿ ಈ ವಿಷಯ ಹೇಳಿದ್ದಾರೆ. ಆದರೆ, ಕೆಜಿಎಫ್ ಸೀಕ್ವೆಲ್ ಮುಗಿದ ನಂತರ ಇಬ್ಬರ ಕಾಂಬಿನೇಷನ್​ನಲ್ಲಿ ಸಿನಿಮಾ ಬರುವುದು ಪಕ್ಕಾ ಎಂದು ತಿಳಿದುಬಂದಿದೆ. ಇನ್ನೊಂದು ಕಡೆ ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ಇಬ್ಬರೂ ಸಂಬಂಧಿಗಳು. ಇನ್ನೆರಡು ದಿನಗಳಲ್ಲಿ ಶ್ರೀಮುರಳಿ 'ಭರಾಟೆ' ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ನಿರ್ದೇಶಕ ಪ್ರಶಾಂತ್ ನೀಲ್ ಶ್ರೀಮುರಳಿ ಮನೆಗೆ ಬಂದು ಶುಭ ಹಾರೈಸಿದ್ದಾರೆ.

ABOUT THE AUTHOR

...view details