ಕರ್ನಾಟಕ

karnataka

ETV Bharat / sitara

ಪ್ರಶಾಂತ್ ನೀಲ್​ - ಪ್ರಭಾಸ್​ ಸಿನಿಮಾ ಆರಂಭವಾಗುವುದು ಯಾವಾಗ..? - Prabhas movie with Prashant neel

ಟಾಲಿವುಡ್ ಸ್ಟಾರ್ ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಖಚಿತವಾಗಿದ್ದು ಅಕ್ಟೋಬರ್ 23 ಪ್ರಭಾಸ್ ಹುಟ್ಟುಹಬ್ಬದಂದು ಈ ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Prashanth neel and prabhas
ಪ್ರಶಾಂತ್ ನೀಲ್

By

Published : Oct 8, 2020, 8:59 AM IST

'ಕೆಜಿಎಫ್' ಚಿತ್ರ ಬಿಡುಗಡೆ ಅದಾಗಿನಿಂದ ಪ್ರಶಾಂತ್ ನೀಲ್ ಲಕ್ ಬದಲಾಯ್ತು. ಯಶ್ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯ್ತು. ಸದ್ಯಕ್ಕೆ ಪ್ರಶಾಂತ್ ನೀಲ್ ಕೆಜಿಎಫ್​​-2 ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ 2021ಕ್ಕೆ ಬಿಡುಗಡೆಯಾಗಲಿದೆ.

ಪ್ರಶಾಂತ್ ನೀಲ್ ತೆಲುಗಿನ ಜ್ಯೂನಿಯರ್ ಎನ್​​ಟಿಆರ್​​ ಅಭಿನಯದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಅವರು ಪ್ರಭಾಸ್​​ ಅವರ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 23 ಪ್ರಭಾಸ್ ಹುಟ್ಟುಹಬ್ಬವಾಗಿದ್ದು ಆ ದಿನ ಪ್ರಶಾಂತ್ ನೀಲ್, ಪ್ರಭಾಸ್ ಜೊತೆ ತಮ್ಮ ಹೊಸ ಸಿನಿಮಾವನ್ನು ಅನೌನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಕ್ಟೋಬರ್ 23 ರಂದು ಕೆಜಿಎಫ್ ಸಿನಿಮಾ ಬಿಡುಗಡೆ ಎಂದು ಈ ಮುನ್ನ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಕೊರೊನಾ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲ.

ಸದ್ಯಕ್ಕೆ ಪ್ರಭಾಸ್, ಪೂಜಾ ಹೆಗ್ಡೆ ಜೊತೆ ನಟಿಸುತ್ತಿರುವ 'ರಾಧೆ ಶ್ಯಾಮ್' ಚಿತ್ರದಲ್ಲಿ ಬ್ಯುಸಿ ಇದ್ದು ಅಕ್ಟೋಬರ್ 23 ರ ವೇಳೆಗೆ ಈ ಸಿನಿಮಾ ಸಂಪೂರ್ಣ ಆಗುವ ಸಾಧ್ಯತೆ ಇದೆ ಎಂಬ ಸುದ್ದಿ ಇದೆ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್​​​​ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಖಚಿತವಾದರೂ ಈ ಸಿನಿಮಾ ಯಾವಾಗ ಆರಂಭವಾಗಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ.

ಓಂ ರಾಹುತ್​ ಜೊತೆ 'ಆದಿಪುರುಷ್'​​ ಚಿತ್ರದ ನಂತರ ನಾಗ್ ಅಶ್ವಿನ್​​​ ನಿರ್ದೇಶನದಲ್ಲಿ ಪ್ರಭಾಸ್ ಒಂದು ಸಿನಿಮಾ ಮಾಡಲಿದ್ದಾರೆ. ಬಹುಶ: ಈ ಚಿತ್ರ ಮುಗಿದ ನಂತರ ಪ್ರಶಾಂತ್ ನೀಲ್ ಸಿನಿಮಾ ಎಂದು ಆಪ್ತ ಮೂಲಗಳು ತಿಳಿಸಿವೆ.

ABOUT THE AUTHOR

...view details