ಸ್ಯಾಂಡಲ್‍ವುಡ್ ಡ್ರಗ್ಸ್ ಹಗರಣದ ನಂತರ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರ ಜನಪ್ರಿಯತೆ ಹೆಚ್ಚಾಗಿದೆಯಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಕನ್ನಡ ಸಿನಿಮಾಗಳಿಂದ ಸಾಲು ಸಾಲು ಆಫರ್ ಬರುತ್ತಿದೆಯಂತೆ. ಬಂದ ಅವಕಾಶವನ್ನು ಸ್ವೀಕರಿಸಿರುವ ಸಂಬರಗಿ ಸಿನಿಮಾಗಳಲ್ಲಿ ನಟಿಸಲಾರಂಭಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕೆಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರೂ ಪ್ರಶಾಂತ್ ಸಂಬರಗಿ ಹೊರಗಿನವರು ಎಂದು ಎಲ್ಲರೂ ಹೇಳುತ್ತಿದ್ದರು. ಅವರಿಗೆ ಕನ್ನಡ ಚಿತ್ರರಂಗದ ಜೊತೆಗೆ ಯಾವುದೇ ನಂಟಿಲ್ಲದಿರುವುದರಿಂದ ಚಿತ್ರರಂಗದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳುತ್ತಿದ್ದರು. ಆದರೆ ಡ್ರಗ್ಸ್ ಹಗರಣದ ನಂತರ ಪ್ರಶಾಂತ್‍ಗೆ ಒಂದಿಷ್ಟು ಆಫರ್ಗಳು ಬರುತ್ತಿದ್ದು ಐದು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಈ ಪೈಕಿ ರವಿ ಶ್ರೀವತ್ಸ ನಿರ್ದೇಶನದ 'ಎಂಆರ್' ಸಿನಿಮಾ ಕೂಡಾ ಒಂದು. ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಂಬರಗಿ ಈಗ ಮೊದಲ ಬಾರಿಗೆ 'ಎಂಆರ್' ಚಿತ್ರದಲ್ಲಿ ಅಂಡರ್ವರ್ಲ್ಡ್ ಡಾನ್ ಬೂಟ್‍ಹೌಸ್ ಕುಮಾರ್ ಅಲಿಯಾಸ್ ಆಯಿಲ್ ಕುಮಾರ್ ಪಾತ್ರವನ್ನು ಮಾಡುತ್ತಿದ್ದಾರೆ. ತಮ್ಮ ಪಾತ್ರಕ್ಕಾಗಿ ಈಗಾಗಲೇ ತಯಾರಿ ಕೂಡಾ ಆರಂಭಿಸಿದ್ದಾರಂತೆ.