ಇಂದು ರಿಲೀಸ್ ಆಗಿರುವ ಸಲಾರ್ ಚಿತ್ರದ ಟೈಟಲ್ಗೆ ಅಪಸ್ವರ ಕೇಳಿ ಬಂದಿದೆ. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಸಿನಿಮಾ ಟೈಟಲ್ ಬಗ್ಗೆ ಟೀಕೆ ಮಾಡಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೇರೆ ಪದ ಸಿಗಲಿಲ್ಲವೇ ನಿಮಗೆ : 'ಸಲಾರ್' ಟೈಟಲ್ ಬಗ್ಗೆ ಪ್ರಶಾಂತ್ ಸಂಬರಗಿ ಟೀಕೆ - Prashant Sambargi News
ಸಲಾರ್ ಚಿತ್ರದ ಟೈಟಲ್ಗೆ ಅಪಸ್ವರ ಕೇಳಿ ಬಂದಿದೆ. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಸಿನಿಮಾ ಟೈಟಲ್ ಬಗ್ಗೆ ಟೀಕೆ ಮಾಡಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಸಲಾರ್ ಚಿತ್ರದ ಪೋಸ್ಟರ್ ಅನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ, ಇಂಡಿಯನ್ ಸಿನೆಮಾ ಅಂತ ಹೇಳಿ ಅರೇಬಿಯಾದ ಹೆಸರು ಯಾಕೆ ಇಟ್ಟಿದ್ದೀರಾ ಕನ್ನಡ, ಸಂಸ್ಕೃತ ಸೇರಿ ಆರು ಶಾಸ್ತ್ರೀಯ ಭಾಷೆಗಳಲ್ಲಿ ಒಂದೂ ಪದ ಸಿಗಲಿಲ್ಲವೇ ನಿಮಗೆ ಎಂದು ಸಲಾರ್ ಟೈಟಲ್ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಸಲಾರ್ ಎಂಬುದು ಅರೇಬಿಯನ್ ಪದ ಎಂದು ಹೇಳಲಾಗುತ್ತಿದೆ. ಸಲಾರ್ ಎಂದರೆ ಒಂದು ತಂಡದ ನಾಯಕ ಎಂದರ್ಥವಂತೆ. ಈ ಹೆಸರನ್ನು ಇಟ್ಟಿರುವುದಕ್ಕೆ ಪ್ರಶಾಂತ್ ಸಂಬರಗಿ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ ಕಿರಗಂದೂರಿಗೆ ಪ್ರಶ್ನೆ ಮಾಡಿದ್ದಾರೆ.