ಸ್ಯಾಂಡಲ್ವುಡ್ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದು ರಾಗಿಣಿ, ಅವರ ಆಪ್ತ ರವಿಶಂಕರ್, ಸಂಜನಾ ಆಪ್ತ ರಾಹುಲ್ನನ್ನು ವಶಕ್ಕೆ ಪಡೆದಿದ್ದಾರೆ. ಸಂಜನಾ ಗಲ್ರಾನಿಗೂ ಕೂಡಾ ಯಾವುದೇ ಕ್ಷಣದಲ್ಲಾದರೂ ನೋಟೀಸ್ ನೀಡುವ ಸಾಧ್ಯತೆ ಇದೆ.
ಸಂಜನಾ ಆಪ್ತ ರಾಹುಲ್ ಜೊತೆ ಪ್ರಶಾಂತ್ ಸಂಬರ್ಗಿ ಇರುವ ಫೋಟೋ ರಿವೀಲ್ - Sandalwood drugs case
ಕನ್ನಡ ಚಿತ್ರರಂಗದ ನಟ-ನಟಿಯರಿಗೆ ಡ್ರಗ್ಸ್ ಆರೋಪಿಗಳ ಜೊತೆ ನಂಟು ಇದೆ ಎಂದು ಹೇಳಿಕೆ ನೀಡಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಇದೀಗ ಸಂಜನಾ ಆಪ್ತ ರಾಹುಲ್ ಜೊತೆ ಕಾಣಿಸಿಕೊಂಡಿರುವ ಫೋಟೋವೊಂದು ರಿವೀಲ್ ಆಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ನಡುವೆ ಸಂಜನಾ ಗಲ್ರಾನಿ ಆಪ್ತ ರಾಹುಲ್ ಜೊತೆ ಪ್ರಶಾಂತ್ ಸಂಬರ್ಗಿ ಕಾಣಿಸಿಕೊಂಡಿರುವ ಫೋಟೋವೊಂದು ರಿವೀಲ್ ಆಗಿದೆ. ಸಾಮಾಜಿಕ ಹೋರಾಟಗಾರ ಎಂದು ಕರೆಸಿಕೊಂಡಿರುವ ಪ್ರಶಾಂತ್ ಸಂಬರ್ಗಿ ಸ್ಯಾಂಡಲ್ವುಡ್ ನಟ-ನಟಿಯರಿಗೆ ಡ್ರಗ್ಸ್ ಜಾಲದ ಬಗ್ಗೆ ನಂಟು ಇದೆ ಎಂದು ಬಹುತೇಕ ಎಲ್ಲಾ ಮಾಧ್ಯಮಗಳಲ್ಲೂ ಹೇಳಿಕೆ ನೀಡಿದ್ದರು. ಸಂಜನಾ ಗಲ್ರಾನಿ ಮೇಲೆ ಕೂಡಾ ಆರೋಪ ಮಾಡುತ್ತಿರುವ ಪ್ರಶಾಂತ್ ಸಂಬರ್ಗಿ ಇದೀಗ ಆಕೆಯ ಆಪ್ತ ರಾಹುಲ್ ಜೊತೆ ಕಾಣಿಸಿಕೊಂಡಿರುವ ಫೋಟೋ ರಿವೀಲ್ ಆಗಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಸಂಚಲನ ಸೃಷ್ಟಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.