ಕೆಜಿಎಫ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾಡಿದ ನಿರ್ಮಾಪಕ ವಿಜಯ್ ಕಿರಗಂದೂರು ಮಾಲೀಕತ್ವದ ಹೊಂಬಾಳೆ ಫಿಲ್ಮ್ ಇದೀಗ ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದೆ. ಈ ಬಗ್ಗೆ ಸ್ವತಃ ಹೊಂಬಾಳೆ ಫಿಲ್ಮ್ ತಂಡವೇ ಮಾಹಿತಿ ನೀಡಿದ್ದು, ನಾಳೆ ಡಿಸೆಂಬರ್ 2ರಂದು ಯಾವ ಸಿನಿಮಾ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.
ಈಗಾಗಲೇ ಹೊಂಬಾಳೆ ಫಿಲ್ಮ್ ನಿರ್ಮಾಣದ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಎಂಬ ಮಾತು ಸಾಕಷ್ಟು ಕೇಳಿ ಬರುತ್ತಿವೆ. ಮತ್ತೊಂದು ಕುತೂಹಲದ ವಿಚಾರ ಏನಂದ್ರೆ ಪ್ರಶಾಂತ್ ಈ ಬಾರಿ ತೆಲುಗಿನ ಡಾರ್ಲಿಂಗ್ ಪ್ರಭಾಸ್ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರಂತೆ.