ಕರ್ನಾಟಕ

karnataka

ETV Bharat / sitara

ನಿರ್ದೇಶಕ ಪ್ರಶಾಂತ್ ರಾಜ್ ವಂಚನೆ ಆರೋಪ.. ವಿಡಿಯೋ ಮೂಲಕ ಡೈರೆಕ್ಟರ್​​ ಸ್ಪಷ್ಟೀಕರಣ..

ನಿರ್ದೇಶಕ ಪ್ರಶಾಂತ್ ರಾಜ್ ಸಂಬಂಧಿಕರಿಂದ ಹಣ ಪಡೆದು ವಂಚನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಇದೀಗ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. ದೂರು ನೀಡಿರುವುದು ಬೇರೆ ಯಾರೂ ಅಲ್ಲಾ ನಮ್ಮ ಅತ್ತೆ ಎಂದು ನಿರ್ದೇಶಕ ಪ್ರಶಾಂತ್​ ರಾಜ್​​ ಹೇಳಿದ್ದಾರೆ.

prasanth raj clrafication
ಪ್ರಶಾಂತ್ ರಾಜ್

By

Published : Dec 15, 2019, 4:49 PM IST

ಬೆಂಗಳೂರು:ಸ್ಯಾಂಡಲ್‌ವುಡ್ ನಿರ್ದೇಶಕ ಪ್ರಶಾಂತ್ ರಾಜ್ ಸಂಬಂಧಿಕರಿಂದ ಹಣ ಪಡೆದು ವಂಚನೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಇದೀಗ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ಸ್ವತಃ ನಿರ್ದೇಶಕ ಪ್ರಶಾಂತ್ ರಾಜ್ ವಿಡಿಯೊ‌‌‌ ಮಾಡಿ ಸ್ಪಷ್ಟನೆ ನೀಡಿದ್ದಾರೆ‌.

ದೂರು ನೀಡಿರುವುದು ಬೇರೆ ಯಾರು ಅಲ್ಲಾ.. ಸ್ವತಃ ನನ್ನ ಅತ್ತೆ ಗಿರಿಜಮ್ಮ.‌ ಅವರ ಮಗ ಅಭಿಲಾಷ್ ಸಿಬಿಐ ಅಧಿಕಾರಿ ಎಂದು ಶ್ರೀಮಂತರಿಗೆ ವಂಚಿಸುತ್ತಿದ್ದ. ಇತ್ತೀಚಿಗಷ್ಟೇ ನಕಲಿ ಸಿಬಿಐ‌ ಅಭಿಲಾಷ್ ಹಾಗೂ ಮತ್ತೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಬಂಧಿತರಿಂದ ಬೆನ್ಜ್ ಕಾರು ಸಹ ಸೀಜ್ ಮಾಡಿದ್ದರು. ಆಗ ಮನೆಗೆ ಕರೆದು ಗಿರಿಜಮ್ಮನವರೇ ಒಂದಷ್ಟು ಹಣ ಮತ್ತು ಒಡವೆ ಕೊಟ್ಟಿದ್ದು ನಿಜ. ಅದನ್ನ ನಾನು ವಾಪಸ್ ಸಹ ಕೊಟ್ಟಿದ್ದೇನೆ, ಅದಕ್ಕೆ ಬೇಕಾದ ದಾಖಲೆ ಸಹ ಇದೆ.

ನಿರ್ದೇಶಕ ಪ್ರಶಾಂತ್ ರಾಜ್ ವಂಚನೆ ಆರೋಪ.. ವಿಡಿಯೋ ಮೂಲಕ ಡೈರೆಕ್ಟರ್ ಸ್ಪಷ್ಟನೆ​​

ಅಭಿಲಾಷ್ ವಿರುದ್ಧ ಕಿಡ್ನ್ಯಾಪ್, ಕೊಲೆ ಯತ್ನ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ. ನನ್ನ ವಿರುದ್ಧ ಯಾಕೆ ಸುಳ್ಳು ದೂರು ದಾಖಲಿಸಿದ್ದಾರೆ ಅನ್ನೋದು ಗೊತ್ತಿಲ್ಲ.. ನಾನು ಖಾಸಗಿ ವಿಚಾರದ ಪ್ರಯುಕ್ತ ಔಟ್ ಆಫ್ ಸ್ಟೇಶನ್​​​ನಲ್ಲಿರುವೆ. ಬಂದ ಕೂಡಲೇ ಈ ಬಗ್ಗೆ ಮಾತನಾಡ್ತೀನಿ. ನಾನು ತಪ್ಪು ಮಾಡಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಕಾನೂನಾತ್ಮಕವಾಗಿ ಶಿಕ್ಷೆಯಾಗಲಿ‌ ಎಂದು‌ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details