ಕರ್ನಾಟಕ

karnataka

ETV Bharat / sitara

ಏರ್​​ಪೋರ್ಟ್​ ರಸ್ತೆಯಲ್ಲಿ 'ಪೊರ್ಕಿ' ಚೆಲುವೆಯ ಕುದುರೆ ಸವಾರಿ - Porki beauty Praneeta Subhash

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಪೊರ್ಕಿ' ಚಿತ್ರದಲ್ಲಿ ನಟಿಸಿರುವ ಪ್ರಣಿತಾ ಸುಭಾಷ್ ಈಗ ಬೆಂಗಳೂರಿನ ಏರ್​​ಪೋರ್ಟ್ ರಸ್ತೆಯ ಕೋಚಿಂಗ್ ಸೆಂಟರ್​ನಲ್ಲಿ ಹಾರ್ಸ್ ರೈಡಿಂಗ್ ಅಭ್ಯಾಸ ಮಾಡುತ್ತಿದ್ದಾರೆ.

Praneeta Subhash horse riding
ಪ್ರಣಿತಾ

By

Published : Aug 15, 2020, 6:33 PM IST

ಲಾಕ್​ ಡೌನ್ ತೆರೆವುಗೊಳಿಸಿದ ನಂತರ ಸ್ಯಾಂಡಲ್​​ವುಡ್​​ ಸೆಲಬ್ರಿಟಿಗಳು ಮತ್ತೆ ಫಿಟ್ನೆಸ್ ಕಡೆ ನಿಧಾನವಾಗಿ ಗಮನ ನೀಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಮನೆಯಲ್ಲೇ ಇದ್ದವರು ಈಗ ಮನೆಯಿಂದ ಹೊರ ಬಂದು ಹಾರ್ಸ್ ರೈಡಿಂಗ್, ಕ್ರಿಕೆಟ್, ಫುಟ್ಬಾಲ್​​​​ನಂತ ಆಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

ಹಾರ್ಸ್ ರೈಡಿಂಗ್ ಅಭ್ಯಾಸ ಮಾಡುತ್ತಿರುವ ಪ್ರಣಿತಾ ಸುಭಾಷ್

ಬಟ್ಟಲು ಕಣ್ಣುಗಳ ಚೆಲುವೆ, 'ಪೊರ್ಕಿ' ಸುಂದರಿ ಪ್ರಣಿತಾ ಸುಭಾಷ್ ಕೂಡಾ ಲಾಕ್ ಡೌನ್ ನಂತರ ಮತ್ತೆ ಫಿಟ್ನೆಸ್ ಮೇಂಟೈನ್ ಮಾಡೋಕೆ ಮುಂದಾಗಿದ್ಧಾರೆ‌. ವಿಶೇಷ ಅಂದ್ರೆ ಪ್ರಣಿತಾ ಜಿಮ್​​ನಲ್ಲಿ ವರ್ಕೌಟ್​​​​​​​​ ಮಾಡುವುದರ ಜೊತೆಗೆ ಹಾರ್ಸ್ ರೈಡಿಂಗ್ ಮೂಲಕ ಕೂಡಾ ಫಿಟ್ ಆಗೋಕೆ ಹೊರಟಿದ್ದಾರೆ. ಕಳೆದ 2 ವಾರಗಳಿಂದ ಪ್ರಣಿತಾ ಬೆಂಗಳೂರು ಏರ್​​​​​​​ಪೋರ್ಟ್​ ರಸ್ತೆಯಲ್ಲಿರುವ ಹಾರ್ಸ್ ರೈಡಿಂಗ್ ಕೋಚಿಂಗ್ ಸೆಂಟರ್​​​​​​​​ನಲ್ಲಿ ಹಾರ್ಸ್ ರೈಡಿಂಗ್ ಅಭ್ಯಾಸ ಮಾಡುತ್ತಿದ್ದಾರೆ.

ಪ್ರಣಿತಾ ಸುಭಾಷ್ ಕುದುರೆ ಸವಾರಿ

ಪ್ರಣಿತಾ ಇದ್ದಕ್ಕಿದ್ದಂತೆ ಹಾರ್ಸ್ ರೈಡಿಂಗ್ ಪ್ರಾಕ್ಟೀಸ್ ಮಾಡ್ತಿರೋದಕ್ಕೆ ಫಿಟ್ನೆಸ್ ಜೊತೆಗೆ ಮತ್ತೊಂದು ಬಲವಾದ ಕಾರಣ ಇದೆಯಂತೆ. 'ಈಗಾಗಲೇ ಕಮಿಟ್ ಆಗಿರುವ ದ್ವಿಭಾಷಾ ಚಿತ್ರವೊಂದರಲ್ಲಿ ನಾನು ಹಾರ್ಸ್ ರೈಡರ್​​​​​ ಪಾತ್ರದಲ್ಲಿ ನಟಿಸುತ್ತಿದ್ದೇನೆ ಆದ್ದರಿಂದ ಹಾರ್ಸ್ ರೈಡಿಂಗ್ ಪ್ರಾಕ್ಟೀಸ್ ಮಾಡ್ತಿದ್ದೀನಿ' ಎಂದು ಪ್ರಣಿತಾ ಹೇಳಿದ್ದಾರೆ. ಅಲ್ಲದೆ ಪ್ರಣಿತಾ ಈಗ ಯಾರ ನೆರವು ಇಲ್ಲದೆ, ಭಯವೂ ಇಲ್ಲದೆ ಒಬ್ಬರೇ ಕುದುರೆ ಸವಾರಿ ಮಾಡ್ತಾರಂತೆ.

ಮುಂದಿನ ಚಿತ್ರಕ್ಕೆ ರೆಡಿಯಾಗುತ್ತಿರುವ ಪ್ರಣಿತಾ

ABOUT THE AUTHOR

...view details