ಕರ್ನಾಟಕ

karnataka

ETV Bharat / sitara

ಸಿನಿಮಾ ಚಿತ್ರೀಕರಣದ ವೇಳೆ ಪ್ರಕಾಶ್​ ರೈಗೆ ಗಾಯ.. ಶಸ್ತ್ರಚಿಕಿತ್ಸೆಗೊಳಗಾಗಲಿರುವ ನಟ - ಶಸ್ತ್ರಚಿಕಿತ್ಸೆಗೊಳಗಾಗಲಿರುವ ಪ್ರಕಾಶ್ ರೈ

ಚಿತ್ರೀಕರಣದ ವೇಳೆ ಗಾಯಗೊಂಡಿರುವ ನಟ ಪ್ರಕಾಶ್​​ ರೈ ಇದೀಗ ಶಸ್ತ್ರಚಿಕಿತ್ಸೆಗೊಳಗಾಗಲಿದ್ದು, ಇದರ ಬಗ್ಗೆ ಖುದ್ದಾಗಿ ಟ್ವೀಟ್ ಮಾಡಿದ್ದಾರೆ.

Prakash Raj
Prakash Raj

By

Published : Aug 10, 2021, 5:41 PM IST

ಹೈದರಾಬಾದ್​:ಸಿನಿಮಾ ಚಿತ್ರೀಕರಣದ ವೇಳೆ ಬಹುಭಾಷಾ ನಟ ಪ್ರಕಾಶ್​ ರೈ ಕೈಗೆ ಗಾಯವಾಗಿದ್ದು, ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಇದೀಗ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ.

ತಮಿಳು ನಟ ಧುನುಷ್ ಅವರ ಚಿತ್ರ 'ತಿರುಚಿತ್ರಾಂಬಲಂ' ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣವ ವೇಳೆ ಪ್ರಕಾಶ್​ ರೈ ಅವರ ಕೈಗೆ ಗಾಯವಾಗಿದ್ದು, ವೈದ್ಯ ಸ್ನೇಹಿತ ಡಾ. ಗುರುವಾ ರೆಡ್ಡಿ ಸಲಹೆ ಮೇರೆಗೆ ಹೈದರಾಬಾದ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಪ್ರಕಾಶ್​ ರೈ ಟ್ವೀಟ್​

ಸಿನಿಮಾ ಚಿತ್ರೀಕರಣದ ವೇಳೆ ಚಿಕ್ಕದಾಗಿ ಕೆಳಗೆ ಬಿದ್ದಿರುವ ಕಾರಣ ಪೆಟ್ಟಾಗಿದೆ. ನನ್ನ ಸ್ನೇಹಿತ ಡಾ. ಗುರುವಾ ರೆಡ್ಡಿ ಜೊತೆಗೆ ಹೈದರಾಬಾದ್​ಗೆ ತೆರಳುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದೇನೆ. ಶೀಘ್ರದಲ್ಲೇ ಗುಣಮುಖನಾಗಿ ವಾಪಸ್​ ಬರುತ್ತೇನೆ. ಇದಕ್ಕಾಗಿ ನಿಮ್ಮ ಹಾರೈಕೆ ನನ್ನೊಂದಿಗೆ ಇರಲಿ ಎಂದಿದ್ದಾರೆ.

ನಟ ಧನುಷ್​ ಅಭಿನಯದ ತಿರುಚಿತ್ರಾಂಬಲಂ ಚಿತ್ರೀಕರಣ ಇದೀಗ ಭರದಿಂದ ಸಾಗಿದ್ದು, ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಪ್ರಕಾಶ್​ ರೈ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಗಾಯವಾಗಿದೆ.

ಇದನ್ನೂ ಓದಿರಿ: ಗಂಡ - ಹೆಂಡ್ತಿ ನಡುವೆ ಜಗಳ: ಮನೆ ಬಿಟ್ಟು ಹೋದ ಹೆತ್ತಮ್ಮನ ಹುಡುಕಲು ರಾತ್ರಿಯಿಡಿ ಸೈಕಲ್​ ತುಳಿದ ಮಗ!

ದಕ್ಷಿಣ ಭಾರತದ ಬಹುಭಾಷಾ ನಟರಾಗಿರುವ ಪ್ರಕಾಶ್​ ರೈ KGF ಚಾಫ್ಟರ್​ - 2, ಮೇಜರ್​, ಪುಷ್ಪಾ, ಅಣ್ಣಾತ್ತೆ, ಎನಿಮಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯ ಮಾಡಿದ್ದು, ಎಲ್ಲವೂ ತೆರೆ ಕಾಣಬೇಕಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಪುನೀತ್​ ರಾಜಕುಮಾರ್​ ಅವರ ಯುವರತ್ನ ಚಿತ್ರದಲ್ಲೂ ಪ್ರಕಾಶ್​ ರೈ ಕಾಣಿಸಿಕೊಂಡಿದ್ದರು.

ನಿನ್ನೆ ಜಿಲ್ಲೆಯ ಬಿಡದಿಯ ಜೋಗಿನದೊಡ್ಡಿ ಬಳಿ 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್​ ಅವಘಡ ಸಂಭವಿಸಿ ತಮಿಳುನಾಡು ಮೂಲದ ಫೈಟರ್​ ವಿವೇಕ್ (28)​ ಮೃತಪಟ್ಟಿರುವ ಘಟನೆ ಸಹ ನಡೆದಿದೆ.

ABOUT THE AUTHOR

...view details