ಸ್ಯಾಂಡಲ್ವುಡ್ನಲ್ಲಿ ಚಾಕೊಲೇಟ್ ಹೀರೋ ಅಂತಾ ಕರೆಸಿಕೊಂಡಿರುವ ಪ್ರಜ್ವಲ್ ದೇವರಾಜ್ ಇದೇ ಮೊದಲ ಬಾರಿಗೆ ಖಾಕಿ ತೊಟ್ಟಿದ್ದಾರೆ. ಇನ್ಸ್‌ಪೆಕ್ಟರ್ ವಿಕ್ರಂಎಂಬ ಸಿನಿಮಾದಲ್ಲಿ ಪ್ರಜ್ವಲ್ ಅಭಿನಯಿಸುತ್ತಿದ್ದು, ಟೈಟಲ್ ಹಾಗೂ ಪೋಸ್ಟರ್ನಿಂದಲೇ ಗಾಂಧಿನಗರದಲ್ಲಿ ಈ ಚಿತ್ರ ಸಖತ್ ಸುದ್ದಿಯಾಗುತ್ತಿದೆ.
ಪ್ರಜ್ವಲ್ಗೆ ಸಿಗಲಿದೆ ಬರ್ತ್‌ಡೇ ಗಿಫ್ಟ್.. 'ಇನ್ಸ್‌ಪೆಕ್ಟರ್ ವಿಕ್ರಂ' ಚಿತ್ರದ ಟೀಸರ್ ರಿಲೀಸ್.. - ಪ್ರಜ್ವಲ್ ದೇವರಾಜು
ಪ್ರಜ್ವಲ್ ಹುಟ್ಟುಹಬ್ಬಕ್ಕೆ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾದ ಟೀಸರ್ ರಿಲೀಸ್ ಬಿಡುಗಡೆಯಾಗಲಿದೆ. ಆ ಮೂಲಕ ನಿರ್ಮಾಪಕರು ಹಾಗೂ ಚಿತ್ರತಂಡ ಪ್ರಜ್ವಲ್ಗೆ ಗಿಫ್ಟ್ ನೀಡಲಿದೆಯಂತೆ. ಸಿನಿಮಾದಲ್ಲಿ ಪ್ರಜ್ವಲ್ ಎರಡು ಶೇಡ್ಗಳಲ್ಲಿ ಕಾಣಸಿಗಲಿದ್ದಾರೆಂದು ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ಅಂತಾನೆ ಹೆಸರಾಗಿರುವ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಪ್ರಜ್ವಲ್ ಹುಟ್ಟುಹಬ್ಬಕ್ಕೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಲಿದ್ದು, ನಿರ್ಮಾಪಕ ಹಾಗೂ ಚಿತ್ರತಂಡದಿಂದ ಪ್ರಜ್ವಲ್ಗೆ ಗಿಫ್ಟ್ ನೀಡಿದಂತಾಗುತ್ತದೆ.
ಶ್ರೀ ನರಸಿಂಹ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ಗೆ ಜೋಡಿಯಾಗಿ ಜಾಕಿ ಸಿನಿಮಾದ ನಾಯಕಿ ಭಾವನಾ ನಟಿಸಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಪ್ರಜ್ವಲ್ ಎರಡು ಶೇಡ್ಗಳಲ್ಲಿ ಕಾಣಸಿಗಲಿದ್ದಾರೆಂದು ಸುದ್ದಿ ಹರಿದಾಡುತ್ತಿದೆ. ಸಿನಿಮಾಕ್ಕೆ ಮಫ್ತಿ ಖ್ಯಾತಿಯ ಛಾಯಾಗ್ರಾಹಕ ನವೀನ್ ಕುಮಾರ್ ಸಿನೆಮಾಟೋಗ್ರಫಿ ನಿರ್ವಹಿಸಿದ್ದಾರೆ. ಇದೀಗ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾದ ಮೇಕಿಂಗ್ ಫೋಟೋಗಳು ರಿವೀಲ್ ಆಗಿ ಎಲ್ಲರ ಗಮನ ಸೆಳೆಯುತ್ತಿವೆ.