ಕರ್ನಾಟಕ

karnataka

ETV Bharat / sitara

'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರದಲ್ಲಿ ದರ್ಶನ್​​.. ಇನ್​ಸ್ಟಾ ಲೈವ್​ನಲ್ಲಿ ಪ್ರಜ್ವಲ್​ ಹೇಳಿದ್ದಿಷ್ಟೇ.. - Darshan in Inspector Vikram Cinema

ಚಿತ್ರದ ಟ್ರೈಲರ್ ರಿಲೀಸ್​ ಬಗ್ಗೆ ಹೇಳಿದ ಡೈನಾಮಿಕ್​ ಪ್ರಿನ್ಸ್​​​ ಪ್ರಜ್ವಲ್​​​, ಇದೇ ತಿಂಗಳು ಜನವರಿ 26 ಗಣರಾಜ್ಯೋತ್ಸವದ ದಿನದ ಅಂಗವಾಗಿ ರಿಲೀಸ್​​ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದಿಂದ ಟೀಸರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ..

'ಇನ್ಸ್ ಪೆಕ್ಟರ್ ವಿಕ್ರಮ್ 'ಚಿತ್ರದಲ್ಲಿ ದರ್ಶನ್​​ : ಇನ್​ಸ್ಟಾ ಲೈವ್​ನಲ್ಲಿ ಪ್ರಜ್ವಲ್​ ಹೇಳಿದ್ದೇನು!
'ಇನ್ಸ್ ಪೆಕ್ಟರ್ ವಿಕ್ರಮ್ 'ಚಿತ್ರದಲ್ಲಿ ದರ್ಶನ್​​ : ಇನ್​ಸ್ಟಾ ಲೈವ್​ನಲ್ಲಿ ಪ್ರಜ್ವಲ್​ ಹೇಳಿದ್ದೇನು!

By

Published : Jan 20, 2021, 3:58 PM IST

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದೇ ಫೆಬ್ರವರಿ 5 ರಂದು ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ.

ಸಿನಿಮಾ ಬಗ್ಗೆ ಮಾತನಾಡಲು ನಟ ಪ್ರಜ್ವಲ್​​​ ದೇವರಾಜ ಇನ್​ಸ್ಟಾಗ್ರಾಮ್‌ನಲ್ಲಿ ಲೈವ್​​ ಬಂದು ಚಿತ್ರದ ರಿಲೀಸ್​​ ಬಗ್ಗೆ ಮಾತನಾಡಿದ್ರು. ಇದೇ ವೇಳೆ ಇನ್ಸ್‌ಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ದರ್ಶನ್​​ ನಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಲೈವ್​​ ವೇಳೆ ಅಭಿಮಾನಿಗಳು ದರ್ಶನ್​ ಬಗ್ಗೆ ಪ್ರಶ್ನೆ ಕೇಳಿದಾಗ ಪ್ರಜ್ವಲ್​ ದೇವರಾಜ್​​ ಉತ್ತಿರಿಸಿದ್ದಾರೆ. ದರ್ಶನ್ ಜೊತೆ ನಟಿಸಿರುವುದಕ್ಕೆ ನಾನು ಲಕ್ಕಿ, ದರ್ಶನ್ ಅಣ್ಣನ ಪಾತ್ರದ ಬಗ್ಗೆ ಈಗ ಏನೂ ಹೇಳಲ್ಲ, ದೊಡ್ಡ ಪರದೆ ಮೇಲೆ ನೋಡಿ ಆವಾಗಲೇ ಮಜಾ ಬರುತ್ತೆ. ಈಗ ಹೇಳಿದ್ರೆ ಕುತೂಹಲ ಇರಲ್ಲ ಎಂದು ಹೇಳಿದ್ದಾರೆ.

ಚಿತ್ರದ ಟ್ರೈಲರ್ ರಿಲೀಸ್​ ಬಗ್ಗೆ ಹೇಳಿದ ಡೈನಾಮಿಕ್​ ಪ್ರಿನ್ಸ್​​​ ಪ್ರಜ್ವಲ್​​​, ಇದೇ ತಿಂಗಳು ಜನವರಿ 26 ಗಣರಾಜ್ಯೋತ್ಸವದ ದಿನದ ಅಂಗವಾಗಿ ರಿಲೀಸ್​​ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದಿಂದ ಟೀಸರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ABOUT THE AUTHOR

...view details