ಕರ್ನಾಟಕ

karnataka

ETV Bharat / sitara

ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ 'ಅರ್ಜುನ್ ಗೌಡ'...ಅಕ್ಟೋಬರ್​​​ನಲ್ಲಿ ಆಡಿಯೋ ರಿಲೀಸ್​​​ - ಸಾಧು ಕೋಕಿಲ

ಲಕ್ಕಿ ಶಂಕರ್ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಅರ್ಜುನ್ ಗೌಡ’ ಸಿನಿಮಾ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದು, ಮುಂದಿನ ತಿಂಗಳು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ರಾಮು ತಿಳಿಸಿದ್ದಾರೆ.

'ಅರ್ಜುನ್ ಗೌಡ'

By

Published : Sep 14, 2019, 12:42 PM IST

ನಾಯಕ ಪ್ರಜ್ವಲ್ ದೇವರಾಜ್ ಪ್ರಥಮ ಬಾರಿಗೆ ಬಾಕ್ಸರ್ ಆಗಿ ಅಭಿನಯಿಸಿರುವ ಚಿತ್ರ ‘ಅರ್ಜುನ್ ಗೌಡ’ ಬಹುತೇಕ ಚಿತ್ರೀಕರಣ ಮುಗಿದಿದೆ. ವಿದೇಶದಲ್ಲಿ ಚಿತ್ರೀಕರಣವಾಗುವ ದೃಶ್ಯಗಳಷ್ಟೇ ಬಾಕಿ ಇವೆ ಎನ್ನಲಾಗಿದೆ.

ಪ್ರಜ್ವಲ್ ದೇವರಾಜ್​​, ಪ್ರಿಯಾಂಕ ತಿಮ್ಮೇಶ್

ಅಕ್ಟೋಬರ್ ತಿಂಗಳಿನಲ್ಲಿ ಧ್ವನಿಸುರಳಿ ಸಮಾರಂಭವನ್ನು ಏರ್ಪಡಿಸುವುದಾಗಿ ನಿರ್ಮಾಪಕ ರಾಮು ಹೇಳಿದ್ದಾರೆ. ಇನ್ನು ಈ ಸಿನಿಮಾ ಖಂಡಿತ ತೆಲುಗಿನ 'ಅರ್ಜುನ್ ರೆಡ್ಡಿ' ರೀಮೇಕ್ ಅಲ್ಲ ಎಂದು ರಾಮು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಹೆಸರು ಕೇಳಿದೊಡನೆ ಎಲ್ಲರೂ ಇದು ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ರೀಮೇಕ್ ಇರಬಹುದು ಎಂದುಕೊಂಡಿದ್ದರು. ಇನ್ನು ಈ ಚಿತ್ರದಲ್ಲಿ ಬಾಕ್ಸರ್ ಆಗಿ ಅಭಿನಯಿಸಲು ಪ್ರಜ್ವಲ್ ದೇವರಾಜ್​ ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಬಾಕ್ಸರ್ ಪಾತ್ರದಲ್ಲಿ ಪ್ರಜ್ವಲ್​​​

ಲಕ್ಕಿ ಶಂಕರ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾ ಹಾಡುಗಳಿಗೆ ಧರ್ಮ ವಿಶ್ ಸಂಗೀತವಿದೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟಿ ಸಂಕಲನ, ಮಾಸ್ ಮಾದ ಸಾಹಸ ನಿರ್ವಹಿಸಿದ್ದಾರೆ. ಪ್ರಿಯಾಂಕ ತಿಮ್ಮೇಶ್ ಚಿತ್ರದಲ್ಲಿ ಪ್ರಜ್ವಲ್​​​ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸಾಧು ಕೋಕಿಲ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನಾ ಶ್ರೀನಿಧಿ, ಭಜರಂಗಿ ಚೇತನ್, ಜೀವ, ಸೂರಜ್, ದಿನೇಶ್​​​​​​​​​ ಮಂಗಳೂರು, ಹನುಮಂತೇ ಗೌಡ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ABOUT THE AUTHOR

...view details