ಕರ್ನಾಟಕ

karnataka

ETV Bharat / sitara

'ವೀರಂ'‌ ಸಿನಿಮಾ: ಲುಕ್​​ ಬದಲಿಸಿದ ಪ್ರಜ್ವಲ್ ದೇವರಾಜ್ - ವೀರಂ ಸಿನಿಮಾಕ್ಕಾಗಿ ಲುಕ್​ ಬದಲಿಸಿಕೊಂಡ ಪ್ರಜ್ವಲ್​ ದೇವರಾಜ್​

ಹೊಸ ವರ್ಷದ ಮೊದಲ ವಾರದಲ್ಲಿ ವೀರಂ ಸಿನಿಮಾ ಶೂಟಿಂಗ್ ಮಾಡಲು ನಿರ್ದೇಶಕ ಖದರ್ ಕುಮಾರ್ ಸಜ್ಜಾಗಿದ್ದಾರೆ. ಈ ಹಿಂದೆ ಡಾಟರ್ ಆಫ್ ಪಾರ್ವತಮ್ಮ ಚಿತ್ರ ನಿರ್ಮಿಸಿದ್ದ ಮತ್ತು ಇದೀಗ ಶುಗರ್​​​ಲೆಸ್ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವ ಕೆ.ಎಂ. ಶಶಿಧರ್ ವೀರಂ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ವೀರಂ'‌ ಸಿನಿಮಾಕ್ಕಾಗಿ ತನ್ನ ಲುಕ್​​ ಬದಲಿಸಿಕೊಂಡ ಪ್ರಜ್ವಲ್ ದೇವರಾಜ್!
'ವೀರಂ'‌ ಸಿನಿಮಾಕ್ಕಾಗಿ ತನ್ನ ಲುಕ್​​ ಬದಲಿಸಿಕೊಂಡ ಪ್ರಜ್ವಲ್ ದೇವರಾಜ್!

By

Published : Dec 31, 2020, 5:01 PM IST

ಖದರ್​​ ಕುಮಾರ್ ನಿರ್ದೇಶನದ 'ವೀರಂ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಎರಡು ಶೇಡ್​​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ವೀರಂ'‌ ಪೋಸ್ಟರ್‌

ಚಿತ್ರದಲ್ಲಿ ಪ್ರಜ್ವಲ್ ಉದ್ದ ಕೂದಲು ಬಿಟ್ಟು ಈ ಪಾತ್ರಕ್ಕಾಗಿ ಮೇಕ್ ಓವರ್ ಆಗುತ್ತಿದ್ದಾರೆ. ಈಗ ಅವರು ತಮ್ಮ ಕೂದಲಿಗೆ ಹೊಸ ರೂಪ ಕೊಟ್ಟಿದ್ದಾರೆ‌. ಹೇರ್ ಸ್ಟೈಲಿಷ್ ಪ್ರಶಾಂತ್, ಪ್ರಜ್ವಲ್ ದೇವರಾಜ್ ಗುಂಗುರು ಕೂದಲನ್ನು ಪಾತ್ರಕ್ಕೆ ತಕ್ಕಂತೆ ಬದಲಾಯಿಸಿದ್ದಾರೆ.

ಹೊಸ ವರ್ಷದ ಮೊದಲ ವಾರದಲ್ಲಿ ವೀರಂ ಸಿನಿಮಾ ಶೂಟಿಂಗ್ ಮಾಡಲು ನಿರ್ದೇಶಕ ಖದರ್ ಕುಮಾರ್ ಸಜ್ಜಾಗಿದ್ದಾರೆ. ಈ ಹಿಂದೆ ಡಾಟರ್ ಆಫ್ ಪಾರ್ವತಮ್ಮ ಚಿತ್ರ ನಿರ್ಮಿಸಿದ್ದ ಮತ್ತು ಇದೀಗ ಶುಗರ್​​​ಲೆಸ್ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವ ಕೆ.ಎಂ. ಶಶಿಧರ್ ವೀರಂ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ವೀರಂ'‌ ಸಿನಿಮಾಕ್ಕಾಗಿ ತನ್ನ ಲುಕ್​​ ಬದಲಿಸಿಕೊಂಡ ಪ್ರಜ್ವಲ್ ದೇವರಾಜ್!

ಖದರ್ ಖ್ಯಾತಿಯ ಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೆಗಲೇರಿಸಿಕೊಂಡಿದ್ದಾರೆ.

ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಮತ್ತು ಲವಿತ್ ಛಾಯಾಗ್ರಹಣವಿದೆ. ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ಅಭಿನಯ ಕುತೂಹಲ ಕೆರಳಿಸಿದೆ.

ABOUT THE AUTHOR

...view details