ಡ್ಯಾನ್ಸ್ ಮಾಸ್ಟರ್ ಪ್ರಭುದೇವಗೆ ಇದೀಗ ಬರೋಬ್ಬರಿ 47 ವರ್ಷ. ಒಂದಿಲ್ಲೊಂದು ವಿಚಾರವಾಗಿ ಸುದ್ದಿ ಆಗ್ತಾನೆ ಇರುವ ನಟ ಮತ್ತು ನಿರ್ದೇಶಕ ಪ್ರಭುದೇವಾ ಇದೀಗ ಅವರು ಮತ್ತೊಂದು ಮದುವೆ ಆಗ್ತಿದ್ದಾರೆ ಎಂಬ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದಾರೆ.
ಹಾಗಾದ್ರೆ ಪ್ರಭುದೇವಗೆ ಇನ್ನೂ ಮದುವೆಯಾಗಿಲ್ವಾ ಎಂದು ನಿಮಗನ್ನಿಸಬಹುದು. ಆದ್ರೆ, ಪ್ರಭುದೇವಾ ಈಗಗಾಲೇ ರಾಮಲತಾ ಎಂಬುವರನ್ನು ಮದುವೆಯಾಗಿ ಅವರಿಂದ ವಿವಾಹ ವಿಚ್ಛೇದನವನ್ನೂ ಪಡೆದಿದ್ದಾರೆ. ಇನ್ನು, ಈ ದಂಪತಿಗೆ ಮೂರು ಜನ ಮಕ್ಕಳಿದ್ದು, 2008ರಲ್ಲಿ ಗಂಡು ಮಗು ಕ್ಯಾನ್ಸರ್ರಿಂದ ಅಸುನೀಗಿತ್ತು.
ಇನ್ನು ರಾಮಲತಾ ಜೊತೆ ವಿಚ್ಛೇದನ ಪಡೆದ ಪ್ರಭುದೇವಾ ಬಹುಭಾಷಾ ನಟಿ ನಯನ ತಾರಾ ಜೊತೆ ಡೇಟಿಂಗ್ನಲ್ಲೂ ಇದ್ರು. ಇವರಿಬ್ಬರು ಲೀವಿಂಗ್ ರಿಲೇಶನ್ನಲ್ಲಿ ಇದ್ದದ್ದನ್ನು ವಿರೋಧಿಸಿದ್ದ ಪ್ರಭುದೇವ ಪತ್ನಿ ರಾಮಲತಾ ಪ್ರತಿಭಟನೆಯನ್ನು ಮಾಡಿ ಸುದ್ದಿಯಾಗಿದ್ರು.
ಇದೆಲ್ಲ ನಡೆದ ಮೇಲೆ ನಯನ ತಾರಾ ಮತ್ತು ನಿರ್ದೇಶಕ ಪ್ರಭುದೇವ ನಡುವೆ ಬಿರುಕು ಮೂಡಿ ಇಬ್ಬರೂ ದೂರಾಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಪ್ರಭುದೇವಾ ಮತ್ತೊಂದು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯಾಗುತ್ತಿದೆ.
ಸದ್ಯ ಪ್ರಭುದೇವ ಮದುವೆಯಾಗುತ್ತೇನೆ ಎನ್ನುತ್ತಿರುವುದು ಅವರ ಸಂಬಂಧಿಕರನ್ನೇ(ಸೊಸೆ) ಅಂತೆ. ಒಟ್ನಲ್ಲಿ ಮೊದಲು ಮದುವೆ ನಂತ್ರ ನಯನ ತಾರಾ ಜೊತೆ ಡೇಟಿಂಗ್ ಇದೀಗ ಮತ್ತೆ ಎರಡನೇ ಮದುವೆ ಅಂತ ಪ್ರಭು ಫುಲ್ ಸುದ್ದಿಯಾಗ್ತಿದ್ದಾರೆ.