ಕರ್ನಾಟಕ

karnataka

ETV Bharat / sitara

ರಜನಿ ರೆಕಾರ್ಡ್​ ಪುಡಿಗಟ್ಟಿದ ಸಾಹೋ...ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ - ಸೂಪರ್ ಸ್ಟಾರ್​ ರಜನಿಕಾಂತ್

ಸೂಪರ್ ಸ್ಟಾರ್​ ರಜನಿಕಾಂತ್ ಅಭಿನಯದ 2.O ಸಿನಿಮಾ 6,900 ಪರದೆಗಳಲ್ಲಿ ಬಿಡುಗಡೆಯಾಗಿತ್ತು. ಈ ದಾಖಲೆಯನ್ನು ಸಾಹೋ ಪುಡಿಗಟ್ಟಿದೆ.

Saaho movie

By

Published : Aug 30, 2019, 10:10 AM IST

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ನಟಿರುವ ಪ್ಯಾನ್ ಇಂಡಿಯಾ ಸಿನಿಮಾ ಸಾಹೋ ಹೊಸ ದಾಖಲೆ ಬರೆದಿದೆ.

ಬಹುನಿರೀಕ್ಷಿತ ಆ್ಯಕ್ಷನ್ ಸಿನಿಮಾ ಸಾಹೋ ಇಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದೆ. ₹350 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಇದೀಗ ಭಾರತೀಯ ಚಿತ್ರರಂಗದಲ್ಲಿ ಹೊಸ ರೆಕಾರ್ಡ್​​ ಕ್ರಿಯೇಟ್ ಮಾಡಿದೆ. ದೇಶ - ವಿದೇಶಗಳಲ್ಲಿ 4 ಭಾಷೆಗಳಲ್ಲಿ ಬರೋಬ್ಬರಿ 10 ಸಾವಿರ ಸ್ಕ್ರೀನ್​​ಗಳಲ್ಲಿ ತೆರೆ ಕಂಡಿದೆ. ಈ ಮೂಲಕ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಈ ಮೊದಲು ಸೂಪರ್ ಸ್ಟಾರ್​ ರಜನಿಕಾಂತ್ ಅಭಿನಯದ 2.O ಸಿನಿಮಾ 6900 ಪರದೆಗಳಲ್ಲಿ ಬಿಡುಗಡೆಯಾಗಿತ್ತು. ಈ ದಾಖಲೆಯನ್ನು ಪುಡಿಗಟ್ಟಿದೆ ಸಾಹೋ.

ಬಾಹುಬಲಿ ಬಳಿಕ ಸಾಹೋ ಚಿತ್ರದಲ್ಲಿ ನಟಿಸಿರುವ ಪ್ರಭಾಸ್ ಎರಡು ವರ್ಷಗಳ ಬಳಿಕ ತೆರೆ ಮೇಲೆ ರಾರಾಜಿಸುತ್ತಿದ್ದಾರೆ. ಇವರ ಜತೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಾಯಕಿ ಆಗಿ ನಟಿಸಿದ್ದಾರೆ.

ABOUT THE AUTHOR

...view details