ಕರ್ನಾಟಕ

karnataka

ETV Bharat / sitara

ಇಟಲಿಗೆ ಪ್ರಯಾಣ ಬೆಳೆಸಲು ಸಜ್ಜಾಗುತ್ತಿರುವ 'ರಾಧೆಶ್ಯಾಮ್' ಚಿತ್ರತಂಡ - Radhe Shyam shooting in Italy

ರಾಧಾಕೃಷ್ಣ ಕುಮಾರ್ ನಿರ್ದೇಶನದಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ರಾಧೆಶ್ಯಾಮ್' ಚಿತ್ರೀಕರಣ ಮತ್ತೆ ಆರಂಭವಾಗಿದ್ದು ಶೀಘ್ರದಲ್ಲೇ ಚಿತ್ರತಂಡ ಇಟಲಿಗೆ ಪ್ರಯಾಣ ಬೆಳೆಸಲಿದೆ.

Prabhas starring Radhe Shyam
'ರಾಧೆಶ್ಯಾಮ್' ಚಿತ್ರತಂಡ

By

Published : Sep 24, 2020, 2:09 PM IST

'ಸಾಹೋ' ನಂತರ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ 'ರಾಧೆಶ್ಯಾಮ್'​​​. ರಾಧಾಕೃಷ್ಣ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಭಾಸ್​​ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಇದು ಪ್ರಭಾಸ್ ಅಭಿನಯದ 20ನೇ ಚಿತ್ರ.

ಲಾಕ್​​ಡೌನ್​​​​ಗೆ ಮುನ್ನ 'ರಾಧೆಶ್ಯಾಮ್'​​​ ಕೆಲವು ದಿನಗಳ ಕಾಲ ಇಟಲಿಯಲ್ಲಿ ಚಿತ್ರೀಕರಣವಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ಇಟಲಿಯಲ್ಲಿ ಕೂಡಾ ಕೊರೊನಾ ಪ್ರಭಾವ ಹೆಚ್ಚಾಗಿದ್ದರಿಂದ ಚಿತ್ರೀಕರಣವನ್ನು ಮುಂದೂಡಲಾಗಿತ್ತು. ಯೂರೋಪಿಯನ್ ಪ್ರೇಮಕಥೆಯ ಸನ್ನಿವೇಶಗಳು ಚಿತ್ರಕ್ಕೆ ಅವಶ್ಯಕವಾಗಿರುವುದರಿಂದ ಇಟಲಿಯಲ್ಲಿ 15 ದಿನಗಳ ಕಾಲ ಚಿತ್ರೀಕರಣ ಮಾಡಬೇಕಿದೆ. ಆದ್ದರಿಂದ ಇದೀಗ ಮತ್ತೆ ಚಿತ್ರತಂಡ ಇಟಲಿಗೆ ಪ್ರಯಾಣ ಬೆಳೆಸಲು ಸಕಲ ಸಿದ್ಧತೆ ಮಾಡುತ್ತಿದೆ ಎನ್ನಲಾಗಿದೆ.

ಗೋಪಿಕೃಷ್ಣ ಮೂವೀಸ್​​​​​​​ ಹಾಗೂ ಯುವಿ ಕ್ರಿಯೇಷನ್ಸ್ ಜೊತೆಯಾಗಿ ನಿರ್ಮಿಸುತ್ತಿರುವ ಈ ಸಿನಿಮಾವನ್ನು 2021 ರಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಚಿತ್ರದಲ್ಲಿ ಜಗಪತಿ ಬಾಬು, ಸತ್ಯರಾಜ್, ಭಾಗ್ಯಶ್ರೀ ಜಯರಾಂ, ಮುರಳಿ ಶರ್ಮ, ಪ್ರಿಯದರ್ಶಿ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಪ್ರಭಾಸ್ ನಾಗ್​​ ಅಶ್ವಿನ್ ನಿರ್ಮಾಣದಲ್ಲಿ ಓಂ ರಾವತ್​​​​ ನಿರ್ದೇಶನದ ಹಿಂದಿ ಚಿತ್ರ 'ಆದಿಪುರುಷ್'​​​ನಲ್ಲಿ ನಟಿಸುತ್ತಿದ್ದಾರೆ.

ABOUT THE AUTHOR

...view details