ಬಾಲಿವುಡ್ ಸಿನಿಮಾ ನಂತರ ಪ್ರಭಾಸ್ ಇಮೇಜ್ ಸಾಕಷ್ಟು ಬದಲಾಗಿದೆ. 'ರಾಧೆಶ್ಯಾಮ್' ಚಿತ್ರೀಕರಣ ಮುಗಿಸಿ 'ಆದಿಪುರುಷ್' ಹಾಗೂ 'ಸಲಾರ್' ಸಿನಿಮಾ ಚಿತ್ರೀಕರಣದಲ್ಲಿ ಪ್ರಭಾಸ್ ಬಹಳ ಬ್ಯುಸಿ ಇದ್ದಾರೆ. ತೆಲಂಗಾಣದ ರಾಮಗುಂಡಂನ ಗೋದಾವರಿಖನಿ ಪಟ್ಟಣದ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಸಲಾರ್ ಚಿತ್ರೀಕರಣ ನಡೆಯುತ್ತಿದೆ.
'ಸಲಾರ್' ಚಿತ್ರದಲ್ಲಿ ಪ್ರಭಾಸ್ ಎಂಟ್ರಿ ಹೇಗಿರಲಿದೆ ಗೊತ್ತಾ...? - Prabhas entry in Salaar
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಸಲಾರ್' ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಎಂಟ್ರಿ ದೃಶ್ಯಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಬಿಎಎಫ್ಟಿಎ ಪ್ರಶಸ್ತಿಗೆ ಆಯ್ಕೆಯಾದ ಪಿಗ್ಗಿ...ಸಂತೋಷ ಹಂಚಿಕೊಂಡ ಸಹೋದರಿ ಪರಿಣಿತಿ
ಸಿನಿಮಾಗೆ ಸಂಬಂಧಿಸಿದ ಪ್ರತಿ ವಿಚಾರವನ್ನು ತಿಳಿಯಲು ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಚಿತ್ರತಂಡದಿಂದ ಆಸಕ್ತಿಕರ ವಿಚಾರವೊಂದು ಹೊರಬಿದ್ದಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಎಂಟ್ರಿ ಸಾಮಾನ್ಯವಾಗಿರುವುದಿಲ್ಲವಂತೆ. ಪ್ರಭಾಸ್ ಎಂಟ್ರಿಯನ್ನು ದೊಡ್ಡ ಮಟ್ಟದಲ್ಲಿ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆಯಂತೆ. ಫೈಟ್ ಸೀಕ್ವೆನ್ಸ್ ಜೊತೆ ಬರುವ ಪ್ರಭಾಸ್ ಎಂಟ್ರಿ ದೃಶ್ಯಕ್ಕಾಗೇ ದೊಡ್ಡ ಮೊತ್ತವನ್ನು ಖರ್ಚು ಮಾಡಲಾಗುತ್ತಿದೆಯಂತೆ. ಈ ಸಿನಿಮಾದಲ್ಲಿ ಒಟ್ಟು 6 ಫೈಟ್ ಇದೆ ಎನ್ನಲಾಗಿದೆ. ಪ್ರಭಾಸ್ ಹಾಗೂ ಶ್ರುತಿ ಹಾಸನ್ ದೃಶ್ಯಗಳು ಕೂಡಾ ಪ್ರೇಕ್ಷಕರನ್ನು ಮೋಡಿ ಮಾಡಲಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರವನ್ನು ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ.