ಇಶಾ ಫೌಂಡೇಶನ್ ಸಂಸ್ಥೆಯ 'ಕಾವೇರಿ ಕೂಗು' ಅಭಿಯಾನಕ್ಕೆ ಸೆಪ್ಟೆಂಬರ್ 8ರಿಂದ ಚಾಲನೆ ದೊರೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೈಸೂರಿನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ. ಈ ಅಭಿಯಾನಕ್ಕೆ ಈಗಾಗಲೇ ಕರ್ನಾಟಕ, ತಮಿಳುನಾಡು ಎರಡೂ ಕಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
'ಕಾವೇರಿ ಕೂಗು' ಹಾಡಿಗೆ ಧ್ವನಿಯಾದ ಪುನೀತ್ ರಾಜ್‍ಕುಮಾರ್
ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಗಳಲ್ಲಿ 'ಕಾವೇರಿ ಕೂಗು' ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸೆಪ್ಟೆಂಬರ್ 8ರಂದು ಈ ಅಭಿಯಾನ ಆರಂಭವಾಗುತ್ತಿದ್ದು, ನಟ ಪುನೀತ್ ರಾಜ್‍ಕುಮಾರ್ ಈ ಅಭಿಯಾನಕ್ಕೆ ಸಂಬಂಧಿಸಿದಂತೆ ಹಾಡೊಂದನ್ನು ಹಾಡಿದ್ದಾರೆ. ಸದ್ಗುರು ವಾಸುದೇವ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಇನ್ನು ಕರ್ನಾಟಕದಲ್ಲಿ ನಟರಾದ ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಯಶ್, ಪುನೀತ್ ರಾಜ್‍ಕುಮಾರ್ ಹಾಗೂ ಇನ್ನಿತರರು ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ವಿಶೇಷ ಎಂದರೆ ಈ ಅಭಿಯಾನಕ್ಕೆ ಸಂಬಂಧಿಸಿದಂತೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡೊಂದನ್ನು ಕೂಡಾ ಹಾಡಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಹಾಡಿನ ಸಾಹಿತ್ಯವನ್ನು ಅದ್ಭುತವಾಗಿ ರಚಿಸಿದ್ದಾರೆ. ಈ ಪದಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಧ್ವನಿಯಾಗುವ ಮೂಲಕ ಈ ವಿಶೇಷ ಹಾಡನ್ನು ಹಾಡಿದ್ದಾರೆ. ಸದ್ಯಕ್ಕೆ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
'ಕಾವೇರಿ ತಾಯಿ ನಿನ್ನ ಮಡಿಲ ಮಗು ನಾನು, ಹಾಲು ಕೊಟ್ಟ ನಿನ್ನ ಕಡಿದುಬಿಟ್ಟೆನು ನಾನು, ನನ್ನ ಬಾಳಿಗೂ ಮುಕ್ತಿಗೂ ಮಾರ್ಗವು ನೀನು. ನಿನ್ನ ಮಡಿಲಲ್ಲಿ ಬೆಳೆದವನು ನಾನು. ಹೀಗೆ ಸಾಗುವ ಹಾಡನ್ನು ಪುನೀತ್ ಅದ್ಭುತವಾಗಿ ಹಾಡಿದ್ದಾರೆ. 'ಕಾವೇರಿ ಕೂಗು' ಅಭಿಯಾನಕ್ಕಾಗಿ ನಾನು ಹಾಡಿದ್ದೇನೆ. ಕಾವೇರಿಯನ್ನು ಉಳಿಸಿಕೊಳ್ಳಲು ನಮ್ಮ ಕೈಲಾದದ್ದನ್ನು ಮಾಡೋಣ' ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ.