ಕರ್ನಾಟಕ

karnataka

ETV Bharat / sitara

ವಿಷ್ಣು ದಾದಾರ ಆ ಸಿನಿಮಾ ನೋಡಲು ಕಾತರರಾಗಿದ್ದಾರಂತೆ ಪುನೀತ್ ರಾಜ್​​​ಕುಮಾರ್​​ - ಮೇರುನಟ ಡಾ. ವಿಷ್ಣುವರ್ಧನ್

'ನಿಷ್ಕರ್ಷ' ಸಿನಿಮಾ ಅಂದಿನ ಕಾಲದಲ್ಲೇ ಹಾಲಿವುಡ್ ಶೈಲಿಯ ಸಿನಿಮಾ ರೀತಿ ಇತ್ತು. ಇದೀಗ ಹೈ ಟೆಕ್ನಾಲಜಿ ತಂತ್ರಜ್ಞಾನದೊಂದಿಗೆ ಮರುಬಿಡುಗಡೆಯಾಗುತ್ತಿರುವ ಸಿನಿಮಾವನ್ನು ನಾನು ಖಂಡಿತ ನೋಡುತ್ತೇನೆ ಎಂದು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹೇಳಿದ್ದಾರೆ.

ಪುನೀತ್ ರಾಜ್​​​ಕುಮಾರ್​​

By

Published : Sep 18, 2019, 11:18 PM IST

ಇಂದು ಕನ್ನಡ ಚಿತ್ರರಂಗದ ಮೇರುನಟ ಡಾ. ವಿಷ್ಣುವರ್ಧನ್ ಹುಟ್ಟಿದ ದಿನ. ಹುಟ್ಟುಹಬ್ಬದ ವಿಶೇಷವಾಗಿ 1993 ರಲ್ಲಿ ಬಿಡುಗಡೆಯಾಗಿದ್ದ ಸುನಿಲ್​​​ಕುಮಾರ್ ದೇಸಾಯಿ ನಿರ್ದೇಶನದ 'ನಿಷ್ಕರ್ಷ' ಸಿನಿಮಾ ಇದೇ ತಿಂಗಳ 20 ರಂದು ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಯಾಗುತ್ತಿದೆ.

ಪುನೀತ್ ರಾಜ್​​​ಕುಮಾರ್​​

ಈ ಸಿನಿಮಾ ನೋಡಲು ಸಾಮಾನ್ಯ ಜನರು ಮಾತ್ರವಲ್ಲ ಸೆಲಬ್ರಿಟಿಗಳು ಕೂಡಾ ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್ ಈ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದರು. ಇದೀಗ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಕೂಡಾ 'ನಿಷ್ಕರ್ಷ' ಸಿನಿಮಾ ನೋಡುತ್ತೇನೆ ಎಂದಿದ್ದಾರೆ. ಸಿನಿಮಾ ಹೈ ಟೆಕ್ನಾಲಜಿ ಕಲರಿಂಗ್ ಹಾಗೂ ಡಿಜಿಟಲ್ ಸೌಂಡ್​​​​​​​​​ನೊಂದಿಗೆ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಪುನೀತ್, ಬೆಂಗಳೂರಿನ ಮಣಿಪಾಲ್ ಸೆಂಟರ್​​​ನಲ್ಲಿ ಈ ಸಿನಿಮಾ ಶೂಟಿಂಗ್ ಮಾಡಲಾಗಿತ್ತು. ಅದು ಆಗಲೇ ಹಾಲಿವುಡ್ ಶೈಲಿಯ ಸಿನಿಮಾದಂತೆ ಇತ್ತು. ನಾನು ಕೂಡಾ ಈ ಸಿನಿಮಾ ಅಭಿಮಾನಿ. ಡಿಜಿಟಲ್ ಸೌಂಡ್​​​​​​ನೊಂದಿಗೆ ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ನೋಡುತ್ತೇನೆ ಎಂದು ಹೇಳುವ ಮೂಲಕ ಪುನೀತ್ ರಾಜ್​ಕುಮಾರ್ 'ನಿಷ್ಕರ್ಷ' ಸಿನಿಮಾ ಮೇಲೆ ತಮಗಿರುವ ಕ್ರೇಜ್ ತೋರಿಸಿಕೊಂಡರು. ಸಿನಿಮಾವನ್ನು ಬಿ.ಸಿ. ಪಾಟೀಲ್ ನಿರ್ಮಿಸಿದ್ದಾರೆ.

ABOUT THE AUTHOR

...view details