'ಯುವರತ್ನ', ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ. ಲಾಕ್ ಡೌನ್ ಕಾರಣದಿಂದ ಸ್ಥಗಿತಕೊಂಡಿದ್ದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಚಿತ್ರತಂಡ ಕೂಡಾ ಹೊಸ ಹುಮ್ಮಸ್ಸಿನಿಂದ ಸೆಪ್ಟೆಂಬರ್ 26 ರಿಂದ ಮತ್ತೆ ಚಿತ್ರೀಕರಣ ಆರಂಭಿಸಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾದ ಒಂದು ಹಾಡು ಮಾತ್ರ ಬಾಕಿ ಉಳಿದಿದೆ.
ಪವರ್ ಸ್ಟಾರ್ ಈ ಬೊಂಬಾಟ್ ಡ್ಯಾನ್ಸ್ಗೆ ಅಭಿಮಾನಿಗಳು ಫಿದಾ ಆಗೋದು ಗ್ಯಾರಂಟಿ..! - choreographer Jony master
ಸೆಪ್ಟೆಂಬರ್ 26 ರಿಂದ 'ಯುವರತ್ನ' ಚಿತ್ರೀಕರಣ ಮತ್ತೆ ಆರಂಭವಾಗಿದೆ. ಪುನೀತ್ ಇಂಟ್ರೊಡಕ್ಷನ್ ಸಾಂಗ್ ಜೊತೆಗೆ ಕೆಲವೊಂದು ಪ್ಯಾಚ್ ವರ್ಕ್ಗಳು ಬಾಕಿ ಉಳಿದಿದ್ದು ಅದೂ ಕೂಡಾ ಶೀಘ್ರದಲ್ಲೇ ಮುಗಿಯಲಿದೆ ಎಂದು ನಿರ್ದೇಶಕ ಸಂತೋಷ್ ಆನಂದ್ರಾಮ್ ಹೇಳಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳುವ ಪ್ರಕಾರ ಇದು ಪುನೀತ್ ರಾಜ್‍ಕುಮಾರ್ ಇಂಟ್ರೊಡಕ್ಷನ್ ಹಾಡಂತೆ. ಈ ಹಾಡಿಗಾಗಿ ಪುನೀತ್ ರಾಜ್‍ಕುಮಾರ್ ಸಖತ್ ಪ್ರಾಕ್ಟೀಸ್ ಮಾಡಿ ಶೂಟಿಂಗ್ಗೆ ಹೋಗಿದ್ದಾರೆ. ಇದೀಗ ಈ ಹಾಡಿನ ಮೇಕಿಂಗ್ ವಿಡಿಯೋ ರಿವೀಲ್ ಆಗಿದೆ. ಟಾಲಿವುಡ್ನ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಈ ಹಾಡನ್ನು ಕೊರಿಯೋಗ್ರಫಿ ಮಾಡಿದ್ದಾರೆ. ಜಾನಿ ಮಾಸ್ಟರ್ ಮೂರನೇ ಬಾರಿಗೆ ಪುನೀತ್ ರಾಜ್ಕುಮಾರ್ಗೆ ಕೊರಿಯೋಗ್ರಫಿ ಮಾಡಿದ್ದಾರೆ. ಪುನೀತ್ ಈ ಹಾಡಿನಲ್ಲಿ ಬಹಳ ಕಷ್ಟವಾದ ಸ್ಟೆಪ್ಸ್ಗಳನ್ನು ಹಾಕಿದ್ದಾರಂತೆ. ಪುನೀತ್ಗೆ ಜಾನಿ ಮಾಸ್ಟರ್ ಸ್ಟೆಪ್ಸ್ ಅಭ್ಯಾಸ ಮಾಡಿಸುತ್ತಿರುವುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು.
ಈ ಬೊಂಬಾಟ್ ಹಾಡಿನಲ್ಲಿ ನಟಿ ಕಾವ್ಯ ಶೆಟ್ಟಿ ಪವರ್ ಸ್ಟಾರ್ ಜೊತೆ ಹೆಜ್ಜೆ ಹಾಕಿದ್ದಾರೆ. ಎರಡು ದಿನಗಳಿಂದ ಈ ಭರ್ಜರಿ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಲಾಗುತ್ತಿದೆ. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿ ಈ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ಪುನೀತ್ ಜೊತೆ ಸಯೇಷಾ ಸೈಗಲ್ ಜೋಡಿಯಾಗಿದ್ದಾರೆ. ಇವರೊಂದಿಗೆ ಧನಂಜಯ್, ಪ್ರಕಾಶ್ ರೈ, ಸೋನು ಗೌಡ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.