ಕರ್ನಾಟಕ

karnataka

ETV Bharat / sitara

ಪುಟಾಣಿ ಅಭಿಮಾನಿಯ ದೊಡ್ಡ ಪ್ರೀತಿಗೆ ಪವರ್ ಸ್ಟಾರ್ ಫಿದಾ ! - ಅಭಿಮಾನಿಯ ದೊಡ್ಡ ಪ್ರೀತಿಗೆ ಪವರ್ ಸ್ಟಾರ್ ಫಿದಾ

ಮದನ್ಯ ಎಂಬ ಮಗು ಅಣ್ಣಾವ್ರು ಫೋಟೋ‌ ಇರುವ ಟೀ ಶರ್ಟ್ ಅನ್ನ ತಪ್ಪಿಕೊಂಡು ಮುದ್ದಾಡುವ ಪರಿ ನೋಡಿದರೆ, ಎಂಥವರು ಕೂಡ ಬೋಲ್ಡ್ ಆಗ್ತಾರೆ. ಈ ವಿಡಿಯೋಗೆ ಅಣ್ಣಾವ್ರ ಮುದ್ದಿನ ಮಗ ಪುನೀತ್ ರಾಜ್‍ ಕುಮಾರ್ ಕೂಡ ಫಿದಾ ಆಗಿದ್ದಾರೆ.

ಪುಟಾಣಿ ಅಭಿಮಾನಿ
ಪುಟಾಣಿ ಅಭಿಮಾನಿ

By

Published : May 20, 2021, 10:37 PM IST

ಡಾ. ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಮಹಾನ್ ನಟ. ಇವತ್ತಿಗೂ ಕೋಟ್ಯಾಂತರ ಅಭಿಮಾನಿಗಳ‌ ಹೃದಯ ಸಿಂಹಾಸನದಲ್ಲಿರುವ ಅಣ್ಣಾವ್ರು, ಆ‌ ಕಾಲದ ಜನರೇಷನ್​ಗೆ ಮಾತ್ರ ಅಲ್ಲ, ಈ ಕಾಲದ ಪುಟಾಣಿ ಮಕ್ಕಳಿಗೆ ಕೂಡ ರಾಜ್ ಅಂದರೆ ಪೂಜ್ಯ ಭಾವನೆ.

ಈ ಮಾತಿಗೆ ಸಾಕ್ಷಿಯಾಗಿ ಮದನ್ಯ ಎಂಬ ಮಗು ಅಣ್ಣಾವ್ರ ಫೋಟೋ‌ ಇರುವ ಟೀ ಶರ್ಟ್ ಅನ್ನ ತಪ್ಪಿಕೊಂಡು ಮುದ್ದಾಡುವ ಪರಿ ನೋಡಿದರೆ, ಎಂಥವರು ಕೂಡ ಬೋಲ್ಡ್ ಆಗ್ತಾರೆ. ಈ ಮುದ್ದಾದ ವಿಡಿಯೋಗೆ, ಅಣ್ಣಾವ್ರ ಮುದ್ದಿನ ಮಗ, ಪುನೀತ್ ರಾಜ್‍ಕುಮಾರ್ ಕೂಡ ಫಿದಾ ಆಗಿದ್ದಾರೆ.

ಅಣ್ಣಾವ್ರ ಪುಟಾಣಿ ಅಭಿಮಾನಿ

ಅಷ್ಟಕ್ಕೂ ಈ ಮಗು ಯಾವ ಊರಿನವಳು ಅನ್ನೋದು ಮಾಹಿತಿ ಇಲ್ಲ. ಆದರೆ ಮಗುವಿನ‌ ತಂದೆ, ಯಾರು ಅವರು ಅಂತಾ ಕೇಳಿದಿಕ್ಕೆ ರಾಜ್ ಕುಮಾರ್ ಅಂತಾ ಹೇಳಿ ಅಣ್ಣಾವ್ರು ಇರುವ ಟೀ ಶರ್ಟ್ ಅನ್ನು ತಬ್ಬಿಕೊಂಡು ಮುದ್ದಾಡುತ್ತಾಳೆ. ಈ‌ ವಿಡಿಯೋವನ್ನ ಪುನೀತ್ ರಾಜ್‍ಕುಮಾರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪುಟ್ಟ ಅಭಿಮಾನಿ‌‌‌ ಅಂತಾ ಹೇಳಿ ಹಂಚಿಕೊಂಡಿದ್ದಾರೆ.

ಈ ಹಿಂದೆ ನಾಲ್ಕು ವರ್ಷದ ಪುಟಾಣಿಯೊಬ್ಬ ಅಣ್ಣಾವ್ರ ಅಭಿನಯದ ಬಬ್ರುವಾಹನ ಚಿತ್ರದ ಸನ್ನಿವೇಶದ ಸಂಭಾಷಣೆಯನ್ನ ಹೇಳುವ ಮೂಲಕ ಅಪ್ಪು ಗಮನ‌ ಸೆಳೆದಿದ್ದ. ಈಗ ಈ ಪುಟಾಣಿಯ ದೊಡ್ಡ ಪ್ರೀತಿಗೆ ಪವರ್ ಸ್ಟಾರ್ ಬೋಲ್ಡ್ ಆಗಿದ್ದಾರೆ.

ABOUT THE AUTHOR

...view details