ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಟನೆ ಜತೆಗೆ ಯುವ ನಿರ್ದೇಶಕರಿಗೆ ಹಾಗೂ ಹೊಸ ಕಲಾವಿದರಿಗೆ ಸಿನಿಮಾ ನಿರ್ಮಾಣ ಮಾಡುತ್ತಿರುವ ನಟ ಪುನೀತ್ ರಾಜ್ಕುಮಾರ್. ಈಗಾಗಲೇ ಪವರ್ ಸ್ಟಾರ್ ತಮ್ಮ ಪಿಆರ್ಕೆ ಬ್ಯಾನರ್ನಲ್ಲಿ ಹಲವಾರು, ಸದಭಿರುಚಿಯ ಸಿನಿಮಾಗಳನ್ನ ನಿರ್ಮಾಣ ಮಾಡಿ ಮೆಚ್ಚುಗೆಗಳಿಸುತ್ತಿದ್ದಾರೆ.
ಅಂಡರ್ ವಾಟರ್ನಲ್ಲಿ ಚಿತ್ರೀಕರಣ ಮಾಡಿರುವ ಫೋಟೋ ಈಗ ತಮ್ಮ ಹೋಮ್ ಬ್ಯಾನರ್ನಲ್ಲಿ ತಾವು, ನಟಿಸುವ 2ನೇ ಸಿನಿಮಾವನ್ನ ಪವರ್ ಸ್ಟಾರ್ ಅನೌನ್ಸ್ ಮಾಡಿದ್ದಾರೆ. ಜೇಕಬ್ ವರ್ಗೀಸ್ ಬಳಿಕ ಪುನೀತ್ ರಾಜ್ ಕುಮಾರ್, ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ಜತೆ ಸಿನಿಮಾ ಮಾಡೋದನ್ನ ಬಹಿರಂಗ ಪಡಿಸಿದ್ದಾರೆ.
ಈ ಬಗ್ಗೆ ಪುನೀತ್ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಮ್ಮ ಹೋಮ್ ಬ್ಯಾನರ್ ಪಿಆರ್ಕೆ ಪ್ರೊಡಕ್ಷನ್ನಲ್ಲಿ ಮುಂದಿನ ಸಿನಿಮಾ ನಿರ್ಮಾಣ ಆಗಲಿದೆ ಎಂದು ಹೇಳಿದ್ದಾರೆ. ಕಥೆ ಹುಟ್ಟಿದ್ದು, ದಶಕಗಳ ಹಿಂದೆ. ನಮ್ಮ ಜನರು, ನಮ್ಮ ನೆಲದ ವೈಭವ. ನಮ್ಮ ತಳಸಮುದಾಯಗಳು ಪ್ರಪಂಚದಾದ್ಯಂತ ಹರಡಿಕೊಂಡಿವೆ. ಹಿಂದಿನ ಪೀಳಿಗೆಗೆ ಸ್ಫೂರ್ತಿ ಅದಮ್ಯವಾಗಿತ್ತು. ಆ ಇತಿಹಾಸವನ್ನು ಮೆಲುಕು ಹಾಕುವ ಸಮಯ ಬಂದಿದೆ ಎಂದು ಸಾಮಾಜಿಕ ಜಾಲಾತಾಣಗಳಲ್ಲಿ ಪುನೀತ್ ಮಾಹಿತಿ ಹಂಚಿಕೊಂಡಿದ್ದಾರೆ.
ವನ್ಯಜೀವಿ ಫೋಟೊಗ್ರಾಫರ್ ಅಮೋಘವರ್ಷ ಜತೆ ಪವರ್ ಸ್ಟಾರ್ ಛಾಯಾಗ್ರಾಹಕ ಅಮೋಘ ವರ್ಷ ಜತೆ, ಪುನೀತ್ ರಾಜ್ ಕುಮಾರ್, ಕರಾವಳಿ ಭಾಗದ ಸುಂದರ ತಾಣಗಲ್ಲಿ ಒಂದು ಸಾಕ್ಷ್ಯ ಚಿತ್ರಕ್ಕಾಗಿ ಚಿತ್ರೀಕರಣ ಮಾಡಿದರು. ಸದ್ಯ ಅಂಡರ್ ವಾಟರ್ನಲ್ಲಿ ಚಿತ್ರೀಕರಣ ಮಾಡಿರುವ ಫೋಟೋವೊಂದನ್ನ ಪುನೀತ್ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಸಿನಿಮಾಗೆ ಡಾ ರಾಜ್ ಕುಮಾರ್ ಅಭಿನಯಿಸಿರುವ ಸೂಪರ್ ಹಿಟ್, ಚಿತ್ರಗಳ ಹೆಸರನ್ನ ಇಡಲು ನಿರ್ಧರಿಸಲಾಗಿದೆಯಂತೆ. ಅದರಲ್ಲಿ ಗಂಧದ ಗುಡಿ ಅಥವಾ ಒಂದು ಮುತ್ತಿನ ಕಥೆ ಟೈಟಲ್ ಬಳಸುವ ಸಾಧ್ಯತೆ ಇದೆ. ಮಡ್ ಸ್ಕಿಪ್ಪರ್ ಸಹಯೋಗದೊಂದಿಗೆ ಪಿಆರ್ಕೆ ಪ್ರೊಡಕ್ಷನ್ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆಯಂತೆ. ನ.1ರಂದು ಕನ್ನಡ ರಾಜ್ಯೋತ್ಸವದಂದು ಈ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ.