ಕರ್ನಾಟಕ

karnataka

ETV Bharat / sitara

ಪವರ್ ಸ್ಟಾರ್ ಮಾಡಿರೋ ಒಳ್ಳೆ ಕೆಲಸಗಳು ಬೇರೆಯವರಿಗೆ ಸ್ಫೂರ್ತಿ: ತೆಲುಗು ನಟ ಶ್ರೀಕಾಂತ್ - ಈಟಿವಿ ಭಾರತದ ಜೊತೆ ಮಾತನಾಡಿದ ತೆಲುಗು ನಟ ಶ್ರೀಕಾಂತ್​​

'ಜೇಮ್ಸ್‌' ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ. ವಿಶ್ವಾದ್ಯಂತ ತೆರೆ ಕಾಣೋದಕ್ಕೆ ಸಜ್ಜಾಗಿರೋ ಜೇಮ್ಸ್ ಚಿತ್ರದಲ್ಲಿ ತೆಲುಗು ನಟರಾದ ಹಾಗೂ ಕನ್ನಡದವರಾದ ಶ್ರೀಕಾಂತ್ ಮೇಕಾ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಇಲ್ಲದೇ ಬಿಡುಗಡೆ ಆಗುತ್ತಿರುವ ಜೇಮ್ಸ್ ಸಿನಿಮಾ ಬಗ್ಗೆ ನಟ ಶ್ರೀಕಾಂತ್ ಈಟಿವಿ ಭಾರತ ಜೊತೆ ‌ಮಾತನಾಡಿದ್ದಾರೆ..

ತೆಲುಗು ನಟ ಶ್ರೀಕಾಂತ್
ತೆಲುಗು ನಟ ಶ್ರೀಕಾಂತ್

By

Published : Mar 16, 2022, 5:28 PM IST

ತೆಲುಗು ಸಿನಿಮಾ ರಂಗದಲ್ಲಿ ತನ್ನದೇ ಸ್ಟಾರ್ ಡಮ್ ಹೊಂದಿರುವ ಶ್ರೀಕಾಂತ್, ಕನ್ನಡ ಮಾತ್ರ ಮರೆತಿಲ್ಲ. ಮೂಲತಃ ಗಂಗಾವತಿಯವರಾದ ಶ್ರೀಕಾಂತ್ ಹೆಂಡತಿ ಹೇಳಿದ್ರೆ ಕೇಳಬೇಕು ಎಂಬ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಬಳಿಕ ಯುಗಾದಿ, ನಂತರ ದಿ ವಿಲನ್ ಬಳಿಕ ಈಗ ಪವರ್ ಸ್ಟಾರ್ ಜೊತೆ ಶ್ರೀಕಾಂತ್ ನಟಿಸಿದ್ದಾರೆ.

ತೆಲುಗು ನಟ ಶ್ರೀಕಾಂತ್

ನಟ ಶ್ರೀಕಾಂತ್ ಅವರಿಗೆ ನಿರ್ದೇಶಕ ಚೇತನ್ ಕುಮಾರ್, ಮೊದಲು ಜೇಮ್ಸ್ ಸಿನಿಮಾದ ಕಥೆ ಹೇಳಿದ್ರಂತೆ. ಇನ್ನು ಪುನೀತ್ ರಾಜ್‍ಕುಮಾರ್ ಅವ್ರನ್ನ 20 ವರ್ಷಗಳ ಹಿಂದೆ ಭೇಟಿ ಮಾಡಿದ್ದೆ. ಆವಾಗ್ಲೆ ಅವರ ಸರಳ ನಡೆ ಹಾಗೂ ಸಿಂಪ್ಲಿಸಿಟಿ ಇಷ್ಟ ಆಗಿತ್ತು. ಅದರಲ್ಲೂ ಜೇಮ್ಸ್ ಸಿನಿಮಾ ಶೂಟಿಂಗ್ ಸ್ಪಾಟ್​​​ಗೆ ಸ್ವತಃ ಪುನೀತ್ ಅವರೇ ಶ್ರೀಕಾಂತ್ ಅವರನ್ನ ರಿಸೀವ್ ಮಾಡಿಕೊಂಡಿದ್ದು, ತುಂಬಾನೇ ಖುಷಿಯಾಯ್ತು ಅಂತಾರೆ ಶ್ರೀಕಾಂತ್ ಮೇಕಾ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

ಪುನೀತ್ ರಾಜ್ ಕುಮಾರ್ ಇಂದು ನಮ್ಮ ಜೊತೆ ಇಲ್ಲ ಅನ್ನೋದನ್ನ ಅರಗಿಸಿಕೊಳ್ಳುವುದಕ್ಕೆ ಆಗ್ತಾ ಇಲ್ಲ. ಇದರ ಜೊತೆಗೆ ಜೇಮ್ಸ್ ಸಿನಿಮಾವನ್ನ ಆಂಧ್ರಪ್ರದೇಶದಲ್ಲಿ ನಾನೇ ಬಿಡುಗಡೆ ಮಾಡುವ ಹೊಣೆಯನ್ನ ಹೊತ್ತುಕೊಂಡಿದ್ದೇನೆ. ಫಸ್ಟ್ ಟೈಮ್ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದೇನೆ ಎಂದು ಶ್ರೀಕಾಂತ್​ ಹೇಳಿದರು.

ತೆಲುಗು ನಟ ಶ್ರೀಕಾಂತ್

ಪುನೀತ್ ರಾಜ್‍ಕುಮಾರ್ ಜೊತೆ ದೊಡ್ಮನೆಯಿಂದ ಬಂದ ಊಟ ಮಾಡೋದು ತುಂಬಾ ಇಷ್ಟ. ಅದರಲ್ಲಿ ಪುನೀತ್ ಅವ್ರೇ ಶ್ರೀಕಾಂತ್ ಸಾರ್ ಮನೆಯಿಂದ ಊಟ ಬರ್ತಾ ಇದೆ, ಊಟ ಮಾಡಬೇಡಿ ಅಂದಿದ್ರಂತೆ. ಅದು ಮಟನ್ ಫ್ರೈ, ಚಿಕನ್ ಫ್ರೈ, ಬಿರಿಯಾನಿ ಅಂತಾ ಅಂದುಕೊಂಡಿರಲಿಲ್ಲ. ಆಗ ನಾನು ಪುನೀತ್ ಒಟ್ಟಿಗೆ ಊಟ ಮಾಡಿದ್ದನ್ನ ಮರೆಯೋದಕ್ಕೆ ಆಗೋಲ್ಲ ಎಂದು ಆ ಮಧುರ ಕ್ಷಣಗಳನ್ನು ಈಟಿವಿ ಭಾರತದ ಮುಂದೆ ಬಿಚ್ಚಿಟ್ಟರು.

ಇದನ್ನೂ ಓದಿ:ಜೇಮ್ಸ್ ಸಿನಿಮಾದ ಅದ್ಧೂರಿ ಸ್ವಾಗತಕ್ಕೆ ಅಭಿಮಾ‌ನಿಗಳು ಸಜ್ಜು.. ನಾಡಿನಾದ್ಯಂತ ಪವರ್ ಸ್ಟಾರ್ ಜಪ..

ಪುನೀತ್ ಇಲ್ಲದೆ, ಅಭಿಮಾನಿಗಳು ತುಂಬಾ ನೋವಿನಿಂದ, ಕೆಲ ಚಿತ್ರಮಂದಿರಗಳಲ್ಲಿ ಹೆಲಿಕಾಪ್ಟರ್​​ನಿಂದ ಹೂ ಮಳೆ ಸುರಿಸೋಕ್ಕೆ ರೆಡಿಯಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅಂದಾಕ್ಷಣ ನನಗೆ ಅವರ ಸಮಾಜ ಸೇವೆ, ಯಾರಿಗೂ ಗೊತ್ತಿಲ್ಲದೆ ಮಾಡಿರುವ ಸಹಾಯಗುಣ ಬೇರೆಯವರಿಗೆ ಒಂದು ಮಾದರಿ ಎಂದು ನಟ ಶ್ರೀಕಾಂತ್ ಹೇಳಿದರು.

For All Latest Updates

TAGGED:

ABOUT THE AUTHOR

...view details