ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಚಿತ್ರದ 'ಪವರ್ ಆಫ್ ಯೂತ್' ಸಾಂಗ್ ಬಿಡುಗಡೆಯಾಗಿದೆ. ಹೊಂಬಾಳೆ ಫಿಲಂಸ್ ಈ ಹಾಡನ್ನು ರಿಲೀಸ್ ಮಾಡಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ.
ಚಿತ್ರದ ಇಂಟ್ರೋ ಸಾಂಗ್ ಇದಾಗಿದ್ದು, ಹಾಡಿನಲ್ಲಿ ಪುನೀತ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಕನ್ನಡ ಸೇರಿ ಈ ಹಾಡು ತೆಲುಗಿನಲ್ಲೂ ಏಕಕಾಲಕ್ಕೆ ರಿಲೀಸ್ ಆಗಿದೆ. ಅಲ್ಲದೆ ಸಿನಿಮಾ ಕೂಡ ತೆಲುಗು ಮತ್ತು ಕನ್ನಡದಲ್ಲಿ ತೆರೆ ಕಾಣಲಿದೆ.
ಯುವರತ್ನ ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ. 'ಪವರ್ ಆಫ್ ಯೂತ್' ಹಾಡಿಗೆ ನಕಶ್ ಅಜೀಜ್ ದನಿಯಾಗಿದ್ದಾರೆ. ಪವರ್ ಆಫ್ ಯೂತ್ ಹಾಡನ್ನು ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿದ್ದರೆ ಹಾಗೂ ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ ಬರೆದಿದ್ದಾರೆ.
ಮತ್ತೊಂದು ವಿಶೇಷತೆ ಏನಂದ್ರೆ ಈ ಹಾಡು ಬಿಡುಗಡೆಯಾದ ಕೇಲವ 30 ನಿಮಿಷಕ್ಕೆ ಬರೋಬ್ಬರಿ ಒಂದು ಲಕ್ಷ ಬಾರಿ ವೀಕ್ಷಣೆಯಾಗಿದೆ. ಯುವರತ್ನ ಸಿನಿಮಾಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನವಿದ್ದು, ವಿಜಯ ಕಿರಗಂದೂರು ಬಂಡವಾಳ ಹಾಕಿದ್ದಾರೆ.