ಕರ್ನಾಟಕ

karnataka

By

Published : Mar 4, 2021, 12:50 PM IST

ETV Bharat / sitara

ಒಂದೇ ವೇದಿಕೆಯಲ್ಲಿ 12 ವಿಭಿನ್ನ ಕಥೆಗಳುಳ್ಳ ಸಿನಿಮಾಗಳ ಪೋಸ್ಟರ್ ರಿಲೀಸ್​

ಲಾಕ್​​ಡೌನ್ ಸಂದರ್ಭದಲ್ಲಿ ನಿರ್ದೇಶಕ ಅಜಯ್ ಕುಮಾರ್ 12 ವಿಭಿನ್ನ ಕಥೆಗಳನ್ನು ಬರೆದಿದ್ದರು. ಇದೀಗ ತಮ್ಮ ಸ್ನೇಹಿತರ ಜೊತೆಗೂಡಿ 12 ವಿಭಿನ್ನ ಸಿನಿಮಾಗಳ ಪೋಸ್ಟರ್​ಗಳನ್ನು​ ಒಂದೇ ವೇದಿಕೆಯಲ್ಲಿ ಅನಾವರಣ ಮಾಡಿದ್ದಾರೆ.

Poster Release of 12 different stories on the same platform
ಒಂದೇ ವೇದಿಕೆಯಲ್ಲಿ 12 ವಿಭಿನ್ನ ಕಥೆಗಳುಳ್ಳ ಸಿನಿಮಾಗಳ ಪೋಸ್ಟರ್ ರಿಲೀಸ್​

ಸ್ಯಾಂಡಲ್​​ವುಡ್​​ನಲ್ಲಿ ಬೆಳಕಿನ ನಡಿಗೆ ಎಂಬ ಮಕ್ಕಳ ಸಿನಿಮಾ ಮಾಡಿ ಗಮನ ಸೆಳೆದಿದ್ದ ನಿರ್ದೇಶಕ ಅಜಯ್ ಕುಮಾರ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಒಂದೇ ವೇದಿಕೆಯಲ್ಲಿ 12 ವಿಭಿನ್ನ ಕಥೆಗಳುಳ್ಳ ಸಿನಿಮಾಗಳ ಪೋಸ್ಟರ್ ರಿಲೀಸ್​

ಲಾಕ್​​ಡೌನ್ ಸಂದರ್ಭದಲ್ಲಿ ಅಜಯ್ ಕುಮಾರ್ 12 ವಿಭಿನ್ನ ಕಥೆಗಳನ್ನು ಬರೆದಿದ್ದರು. ಇದೀಗ ತಮ್ಮ ಸ್ನೇಹಿತರ ಜೊತೆಗೂಡಿ 12 ವಿಭಿನ್ನ ಸಿನಿಮಾಗಳ ಪೋಸ್ಟರ್​ಗಳನ್ನು​ ಒಂದೇ ವೇದಿಕೆಯಲ್ಲಿ ಅನಾವರಣ ಮಾಡಿದ್ದಾರೆ.

ನಟಿ ರಾಗಿಣಿ ದ್ವಿವೇದಿ, ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ನಾಗೇಂದ್ರ ಅರಸ್, ಕಲಾ ನಿರ್ದೇಶಕ ಶಶಿಧರ್ ಅಡಪ ಹಾಗೂ ನಿರ್ಮಾಪಕರ ನಾಗೇಶ್ ಕುಮಾರ್ ಅವರಿಂದ ತಮ್ಮ 12 ವಿಭಿನ್ನ ಕಥೆಗಳ ಸಿನಿಮಾಗಳ ಪೋಸ್ಟರ್ ಬಿಡುಗಡೆ ಮಾಡಿಸಿದರು.

ಲವ್ ಯು ಚಿನ್ನ, ಆಂಡ್ರಾಯ್ಡ್ ಪೋನ್, ಮಂದಾರ, ರಕ್ತಾಕ್ಷಿ ಸಿನಿಮಾಗಳ ಪೋಸ್ಟರ್​​ ಅನ್ನು ರಾಗಿಣಿ ದ್ವಿವೇದಿ ಅನಾವರಣ ಮಾಡಿದರು. ದೇವರ ಮಕ್ಕಳು, ಪ್ರೇಮಂ ಶರಣಂ ಗಚ್ಚಾಮಿ, ಡ್ರಗ್ ಪೆಡ್ಲರ್, ಲಾಕ್​ಡೌನ್, ಸಂಗ್ಯಾ ಬಾಳ್ಯಾ ಸೇರಿದಂತೆ ವಿವಿಧ ಸಿನಿಮಾಗಳನ್ನು ಪೋಸ್ಟರ್​ರನ್ನ ವಿ.ನಾಗೇಂದ್ರ ಪ್ರಸಾದ್ ಸೇರಿದಂತೆ ಗಣ್ಯರು ರಿಲೀಸ್ ಮಾಡಿದರು.

ಪೋಸ್ಟರ್​ಗಳ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ಅಜಯ್ ಕುಮಾರ್, ಸ್ನೇಹಿತರು ಹಾಗೂ ಸಹ ನಿರ್ದೇಶಕರು ನಾನು ಲಾಕ್​ಡೌನ್ ಸಂದರ್ಭದಲ್ಲಿ ಬರೆದ ಸಿನಿಮಾಗಳ ಕಥೆಯನ್ನ‌ ನಿರ್ದೇಶನ ಹಾಗೂ ನಿರ್ಮಾಣ ಮಾಡೋದಿಕ್ಕೆ ಕೈ ಜೋಡಿಸಿದ್ದಾರೆ ಎಂದರು.

ಓದಿ:ಮದುವೆಯಾಗಿ 6 ವರ್ಷಗಳ ನಂತರ ಸಿಹಿ ಸುದ್ದಿ ಹಂಚಿಕೊಂಡ ಶ್ರೇಯಾ ಘೋಷಾಲ್

ಬಳಿಕ ಮಾತನಾಡಿದ ರಾಗಿಣಿ ದ್ವಿವೇದಿ, ಸಿನಿಮಾ‌ ಇಂಡಸ್ಟ್ರಿಯಲ್ಲಿ ಸೋಲು - ಗೆಲುವುಗಳನ್ನು ನನ್ನ ತರ ಸಹಿಸಿಕೊಳ್ಳಬೇಕು ಎಂದು ಯುವ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಕಿವಿ ಮಾತು ಹೇಳಿದರು.

ABOUT THE AUTHOR

...view details