ಕಂಗನಾ ರಣಾವತ್ ಸಹೋದರಿ ರಂಗೋಲಿ ಚಂಡೆಲ್ ತನ್ನ ಮೇಲಾಗಿದ್ದ ಆ್ಯಸಿಡ್ ದಾಳಿಯ ವೇಳೆ ಕಂಗನಾ ಮಾಡಿದ್ದ ಸಹಾಯವನ್ನು ನೆನೆದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ಆ್ಯಸಿಡ್ ದಾಳಿಯಿಂದ ನರಳುತ್ತಿದ್ದಾಗ ಕಂಗನಾ ಮಾಡಿದ ಸಹಾಯ ನೆನೆದ ರಂಗೋಲಿ
ತನ್ನ ಮೇಲಾದ ಆ್ಯಸಿಡ್ ದಾಳಿ ವೇಳೆ ತನ್ನ ತಂಗಿಯ ಸಹಾಯ ನೆನೆದಿರುವ ಕಂಗನಾ ರಣಾವತ್ ಸಹೋದರಿ ರಂಗೋಲಿ ಭಾವುಕ ಟ್ವೀಟ್ವೊಂದನ್ನು ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಂಗೋಲಿ, ಅಂದು ನನ್ನ ಮೇಲೆ ಆ್ಯಸಿಡ್ ದಾಳಿಯಾದಾಗ ನಿನಗೆ ಕೇವಲ 19 ವರ್ಷ. ನನ್ನ ಅಪ್ಪ-ಅಮ್ಮ ಕೂಡ ನನ್ನ ಮುಖದ ಮೇಲಾದ ಗಾಯವನ್ನು ನೋಡಿ ನೋವಿನಲ್ಲಿ ಸುಮ್ಮನಾಗುತ್ತಿದ್ದರು. ಆದ್ರೆ ನೀನು ನನಗೆ ಸರಿಯಾಗಿ ಚಿಕಿತ್ಸೆ ನೀಡಿದ್ದೆ. ರಾತ್ರಿ-ಹಗಲೆನ್ನದೆ ನನಗಾಗಿ ಶ್ರಮಿಸಿದ್ದೆ. ಈ ನಿನ್ನ ಸಹಾಯದ ಋಣವನ್ನು ನಾನೆಂದೂ ತೀರಿಸಲು ಸಾಧ್ಯವಿಲ್ಲ ಚೋಟು ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ ರಂಗೋಲಿ.
ಇದೇ ತಿಂಗಳಲ್ಲಿ ತಮ್ಮ ಮೇಲಾಗಿದ್ದ ಆ್ಯಸಿಡ್ ದಾಳಿ ಬಗ್ಗೆ ನೆನೆದು ಟ್ವೀಟ್ ಮಾಡಿದ್ದ ರಂಗೋಲಿ, ನನ್ನ ಮೇಲೆ ಆ್ಯಸಿಡ್ ದಾಳಿ ಮಾಡಿದವನ ಹೆಸರು ಅವಿನಾಶ್ ಶರ್ಮಾ. ನನ್ನನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ಅವಿನಾಶ್, ನನ್ನಿಂದ ನಕಾರಾತ್ಮಕ ಉತ್ತರ ದೊರೆತಾಗ ನನ್ನ ಮೇಲೆ ಆ್ಯಸಿಡ್ ಎರಚಿದ್ದ ಎಂದು ರಂಗೋಲಿ ಹೇಳಿಕೊಂಡಿದ್ದರು.