ಡಾಲಿ ಹೆಸರಿನ ಮೂಲಕ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ಗಿರಿಯನ್ನು ಹೆಚ್ಚಿಸಿಕೊಂಡ ನಟ ಧನಂಜಯ್. ಟಗರು ಸಿನಿಮಾದಲ್ಲಿ ಡಾಲಿ ಕ್ಯಾರೆಕ್ಟರ್ ಧನಂಜಯ್ಗೆ ಅದೃಷ್ಟದ ಹೆಸರು ಆಗಿ ಬದಲಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅಭಿಮಾನಿಗಳು ಕೂಡಾ ಇಂದಿಗೂ ಪ್ರೀತಿಯಿಂದ ಧನಂಜಯ್ಗೆ ಡಾಲಿ ಹೆಸರಿನಿಂದಲೇ ಕರೆಯುತ್ತಿದ್ದಾರೆ.
ಡಬ್ಬಿಂಗ್ ಆರಂಭಿಸಿದ 'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರತಂಡ
'ಪಾಪ್ಕಾರ್ನ್ ಮಂಕಿ ಟೈಗರ್ ' ಚಿತ್ರದ ಡಬ್ಬಿಂಗ್ ಕೆಲಸ ಆರಂಭವಾಗಿದೆ. 'ಟಗರು' ಸಿನಿಮಾ ಹಿಟ್ ಆದ ನಂತರ ಧನಂಜಯ್ ಹಾಗೂ ಸೂರಿ ಈ ಸಿನಿಮಾದಿಂದ ಮತ್ತೊಮ್ಮೆ ಒಂದಾಗಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಧನಂಜಯ್, ಸದ್ಯಕ್ಕೆ 'ಪಾಪ್ಕಾರ್ನ್ ಮಂಕಿ ಟೈಗರ್' ಡಬ್ಬಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಿರ್ದೇಶಕ ದುನಿಯಾ ಸೂರಿ, ನಿವೇದಿತಾ, ಅಮೃತಾ ಅಯ್ಯಂಗಾರ್ ಹಾಗೂ ನಿರ್ಮಾಪಕ ಸುಧೀರ್, ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಡಬ್ಬಿಂಗ್ ಕೆಲಸವನ್ನು ಆರಂಭಿಸಿದ್ದಾರೆ. 'ಟಗರು' ಸಿನಿಮಾ ನಂತರ ನಿರ್ದೇಶಕ ದುನಿಯಾ ಸೂರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 'ಟಗರು' ಸಿನಿಮಾ ಹಿಟ್ ಆದ ನಂತರ ಧನಂಜಯ್ ಹಾಗೂ ಸೂರಿ ಮತ್ತೊಮ್ಮೆ ಒಂದಾಗಿದ್ದಾರೆ. ಧನಂಜಯ್, ಅಮೃತಾ ಅಯ್ಯಂಗಾರ್, ಸಪ್ತಮಿ, ಮೋನಿಶಾ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸುಧೀರ್ ಹಲವು ವರ್ಷಗಳಿಂದ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಪಾಪ್ಕಾರ್ನ್ ಮಂಕಿ ಟೈಗರ್, ಡಿಸೆಂಬರ್ನಲ್ಲಿ ತೆರೆಗೆ ಬರಲಿದೆ.