ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಪ್ರತಿ ದಿನ ನೂರಾರು ಜನರ ಹೆಮ್ಮಾರಿಗೆ ಬಲಿಯಾಗುತ್ತಿದ್ದಾರೆ. ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು, ಸಹ ನಟರು ಕೊರೊನಾಗೆ ಬಲಿಯಾಗುತ್ತಿದ್ದಾರೆ.
ನಿರ್ಮಾಪಕ ಕೋಟಿ ರಾಮು, ಅಣ್ಣಯ್ಯ ಚಿತ್ರದ ನಿರ್ಮಾಪಕ ಚಂದ್ರಶೇಖರ್ ಬಳಿಕ, ಈಗ ಪಾಪ್ ಕಾರ್ನ್ ಮಂಕಿಟೈಗರ್, ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ ಚಿತ್ರಗಳ ಸಹ ನಿರ್ಮಾಪಕ ರಾಜಶೇಖರ್ ಕೊರೊನಾಗೆ ಉಸಿರು ಚೆಲ್ಲಿದ್ದಾರೆ.
38 ವರ್ಷದ ರಾಜಶೇಖರ್ ಮೂಲತಃ ಮೈಸೂರಿನವರಾಗಿದ್ದು, ಬೆಂಗಳೂರಲ್ಲಿ ವಾಸವಾಗಿದ್ದರು. ಆದರೆ, ಕೆಲ ದಿನಗಳ ಹಿಂದೆ ರಾಜಶೇಖರ್ಗೆ ಕೊರೊನಾ ಪಾಸಿಟಿವ್ ಆಗಿ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ರಂತೆ. ಆದರೆ ಮನೆಯಲ್ಲೇ ಉಸಿರಾಟದ ತೊಂದರೆ ಆದ ಕಾರಣ, ಸರಿ ಸುಮಾರು 5 ಗಂಟೆಗೆ ಹೊತ್ತಿಗೆ ರಾಜಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.