ಸ್ಯಾಂಡಲ್ವುಡ್ನಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಸೌಂಡ್ ಮಾಡುತ್ತಿರುವ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್. ಇದೀಗ ಈ ಚಿತ್ರ ಸೆನ್ಸಾರ್ ಮುಗಿಸಿ, ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಮಹಾಶಿವರಾತ್ರಿ ಹಬ್ಬದಂದು ಅಂದ್ರೆ, ಇದೇ ತಿಂಗಳ 21ಕ್ಕೆ ರಾಜ್ಯದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗ್ತಿದೆ.
ಇದೇ ಶಿವರಾತ್ರಿಗೆ ಬರ್ತಿದೆ ಪಾಪ್ ಕಾರ್ನ್ ಮಂಕಿ ಟೈಗರ್ - Pop Corn Monkey Tiger Release on Feb 21
ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಸೆನ್ಸಾರ್ ಮುಗಿಸಿ, ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಮಹಾಶಿವರಾತ್ರಿ ಹಬ್ಬದಂದು ಅಂದ್ರೆ, ಇದೇ ತಿಂಗಳ 21ಕ್ಕೆ ರಾಜ್ಯದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗ್ತಿದೆ.
ಮಾದೇವ ಸಾಂಗ್ ಮತ್ತು ಟೀಸರ್ನಿಂದ ಕನ್ನಡ ಚಿತ್ರಪ್ರಿಯರಲ್ಲಿ ಹೈಪ್ ಕ್ರಿಯೇಟ್ ಮಾಡಿರೋ ಪಾಪ್ ಕಾರ್ನ್ ಮಂಕಿ ಟೈಗರ್, ಈ ವರ್ಷದ ನಿರೀಕ್ಷೆಯ ಚಿತ್ರ. ಟಗರು ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ, ಡಾಲಿ ಧನಂಜಯ ಮತ್ತು ಸೂರಿ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಮತ್ತೊಂದು ಸಿನಿಮಾ ಇದು.
ಈ ಚಿತ್ರದಲ್ಲಿ ಡಾಲಿ ಧನಂಜಯ ಜೊತೆಗೆ ನಿವೇದಿತಾ, ಅಮೃತಾ ಐಯ್ಯಂಗಾರ್, ಸಪ್ತಮಿ, ಕಾಕ್ರೋಚ್ ಸುಧಿ, ಪೂರ್ಣಚಂದ್ರ ತೇಜಸ್ವಿ, ಮೌನೀಶ ನಾಡಿಗೇರ್ ಸೇರಿದಂತೆ ಪ್ರತಿಭಾವಂತ ತಾರಾ ಬಳಗವಿದೆ. ಟಗರು ಚಿತ್ರಕ್ಕೆ ಟ್ರೆಂಡಿ ಸಂಗೀತ ಕೊಟ್ಟಿದ್ದ ಚರಣ್ ರಾಜ್ ಈ ಚಿತ್ರದಲ್ಲೂ ಕಮಾಲ್ ಮಾಡಿದ್ದಾರೆ.
TAGGED:
ಪಾಪ್ ಕಾರ್ನ್ ಮಂಕಿ ಟೈಗರ್