ಕರ್ನಾಟಕ

karnataka

ETV Bharat / sitara

ನಟಿ ಪೂನಂ ಪಾಂಡೆ ಪತಿಗೆ ಷರತ್ತುಬದ್ದ ಜಾಮೀನು, ಅಷ್ಟಕ್ಕೂ ಹಾಟ್​ ನಟಿಯ ಪತಿ ಮಾಡಿದ್ದಾದ್ರೂ ಏನು? - ಪೂನಂ ಪಾಂಡೆ ಗಂಡನ ವಿರುದ್ಧ ದೂರು

ದೌರ್ಜನ್ಯ ಎಸಗಿದ ಆರೋಪದ ಮೇಲೆ ಗಂಡನ ವಿರುದ್ಧ ನಟಿ ಪೂನಂ ಪಾಂಡೆ ದೂರು ನೀಡಿದ್ದಳು. ಆದರೆ ಇದೀಗ ಅವರಿಗೆ ಜಾಮೀನು ನೀಡಲಾಗಿದೆ.

Poonam Pandey's husband gets bail
Poonam Pandey's husband gets bail

By

Published : Sep 23, 2020, 4:11 PM IST

ಪಣಜಿ(ಗೋವಾ):ಬಹುಕಾಲದ ಗೆಳೆಯನೊಂದಿಗೆ ಕಳೆದ 10 ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಪೂನಂ ಪಾಂಡೆ ಗಂಡನ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇದೀಗ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.

ಪತಿಯ ವಿರುದ್ಧ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪದ ಮೇಲೆ ಪತಿ ಸ್ಯಾಮ್​ ಬಾಂಬೆ ವಿರುದ್ಧ ಗೋವಾದಲ್ಲಿ ದೂರು ದಾಖಲು ಮಾಡಿದ್ದಳು. ಇದಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದರು.

ಸದ್ಯ ಗೋವಾದ ಪ್ರಥಮ ದರ್ಜೆ ನ್ಯಾಯಾಲಯ ಅವರಿಗೆ ಷರತ್ತುಬದ್ದ ಜಾಮೀನು ನೀಡಿದೆ. ಜತೆಗೆ 20 ಸಾವಿರ ರೂ ಶ್ಯೂರಿಟಿ ಇಟ್ಟುಕೊಂಡಿದೆ. ಈ ವೇಳೆ, ಯಾವುದೇ ಸಾಕ್ಷಿ ನಾಶ ಮಾಡವಂತೆ ವಾರ್ನ್​ ಮಾಡಿದ್ದಾಗಿ ತಿಳಿದು ಬಂದಿದೆ. ಪೂನಂ ಪಾಂಡೆ ದೂರಿನ ಆಧಾರದ ಮೇಲೆ ಸ್ಯಾಮ್​ ಬಾಂಬೆ ವಿರುದ್ಧ ಸೆಕ್ಷನ್​ 323, 504,354 ಹಾಗೂ 506ರ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

ABOUT THE AUTHOR

...view details