ಕರ್ನಾಟಕ

karnataka

ETV Bharat / sitara

ಉತ್ತರ ಗೋವಾ ಪೊಲೀಸರಿಂದ ಪೂನಂ ಪಾಂಡೆ ಬಂಧನ - ನಟಿ ಪೂನಂ ಪಾಂಡೆ ಪೊಲೀಸರ ವಶಕ್ಕೆ

ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪದ ಮೇಲೆ ನಟಿ ಪೂನಂ ಪಾಂಡೆ ಅವರನ್ನು ಉತ್ತರ ಗೋವಾ ಪೊಲೀಸರು ಬಂಧಿಸಿದ್ದಾರೆ.

Poonam Pandey arrested for shooting obscene video in Goa
ಉತ್ತರ ಗೋವಾ ಪೊಲೀಸರಿಂದ ಪೂನಂ ಪಾಂಡೆ ಬಂಧನ

By

Published : Nov 5, 2020, 5:57 PM IST

Updated : Nov 6, 2020, 6:31 AM IST

ಗೋವಾ:ಅನುಮತಿ ಪಡೆದುಕೊಳ್ಳದೇ ಚಾಪೋಲಿ ಅಣೆಕಟ್ಟಿನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ್ದಕ್ಕಾಗಿ ಬಾಲಿವುಡ್ ನಟಿ ಪೂನಂ ಪಾಂಡೆ ಅವರನ್ನ ಗೋವಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್ ದೂರಿನ ಆಧಾರದ ಮೇಲೆ ನಿನ್ನೆ ನಟಿ ವಿರುದ್ಧ ಐಪಿಸಿ ಸೆಕ್ಷನ್ 294ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್​ ಸಿಬ್ಬಂದಿಗಳ ಅಮಾನತುಗೊಳಿಸಲಾಗಿದೆ.

ಚಾಪೋಲಿ ಅಣೆಕಟ್ಟಿನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ಗೋವಾ ಫಾರ್ವರ್ಡ್ ಪಕ್ಷದ ಮಹಿಳಾ ವಿಭಾಗವು ದಕ್ಷಿಣ ಗೋವಾ ಎಸ್‌ಪಿಗೆ ನಟಿ ಪೂನಂ ಪಾಂಡೆ ವಿರುದ್ಧ ದೂರು ನೀಡಲಾಗಿತ್ತು. ಉತ್ತರ ಗೋವಾದ ಪಂಚತಾರಾ ಹೋಟೆಲ್​ನಲ್ಲಿ ಉಳಿದುಕೊಂಡಿದ್ದ ನಟಿ ಪೂನಂ ಅವರನ್ನ ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡು ತದನಂತರ ಕನಕೋನ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಚಿತ್ರೀಕರಣಕ್ಕೆ ಅವಕಾಶ ನೀಡಿ, ಅಧಿಕಾರದ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಇಬ್ಬರು ಪೊಲೀಸ್​ ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ.

Last Updated : Nov 6, 2020, 6:31 AM IST

ABOUT THE AUTHOR

...view details