ಕರ್ನಾಟಕ

karnataka

ETV Bharat / sitara

ಬಿಗ್​ ಬಿ ಜತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವಾಸೆ.. ನಟಿ ಪೂಜಾ ಹೆಗ್ಡೆ ಮನದಾಳ - ಅಮಿತಾಭ್ ಬಚ್ಚನ್‌

ಬಹುಭಾಷಾ ನಟಿ ಪೂಜಾ ಹೆಗ್ಡೆ, ಟ್ವಿಟರ್​ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್, ಮೆಗಾಸ್ಟಾರ್ ಚಿರಂಜೀವಿ, ಯಶ್ ಸೇರಿ ಹಲವರ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಪೂಜಾ ಹೆಗ್ಡೆ
ಪೂಜಾ ಹೆಗ್ಡೆ

By

Published : Oct 19, 2021, 5:04 PM IST

ಹೈದರಾಬಾದ್: ಕರುನಾಡಲ್ಲಿ ಹುಟ್ಟಿ, ಬಹುಭಾಷಾ ಚಿತ್ರಗಳಲ್ಲಿ ನಟಿಸುತ್ತಿರುವ ನಟಿ ಪೂಜಾ ಹೆಗ್ಡೆ. ಅಖಿಲ್‌ ಅಕ್ಕಿನೇನಿ - ಪೂಜಾ ಹೆಗ್ಡೆ ಅಭಿನಯದ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರ ಅಕ್ಟೋಬರ್​ 15ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಮಧ್ಯೆ ಪೂಜಾ ಹೆಗ್ಡೆ ತಮ್ಮ ಟ್ವಿಟರ್​ನಲ್ಲಿ ‘ನನಗೆ ಸ್ವಲ್ಪ ಸಮಯವಿದೆ ಏನಾದರೂ ಕೇಳಿ’ ಎಂದು ಪೋಸ್ಟ್‌ವೊಂದನ್ನು ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

ನಿಮ್ಮ ನೆಚ್ಚಿನ ನಟ ಯಾರು? ಎಂಬ ಪ್ರಶ್ನೆಗೆ ಉತ್ತರಿಸಿರುವ ಪೂಜಾ, ‘ನನ್ನ ನೆಚ್ಚಿನ ನಟ ಅಮಿತಾಭ್ ಬಚ್ಚನ್‌, ಅವರೊಂದಿಗೆ ಅಭಿನಯಿಸುವ ಆಸೆಯಿದೆ. ಆ ಆಸೆ ಮುಂದೊಂದು ದಿನ ನಿಜವಾಗುತ್ತದೆ ಎಂದು ಬಯಸಿದ್ದೇನೆ’ ಎಂದಿದ್ದಾರೆ.

ತೆಲುಗು ಮೆಗಾಸ್ಟಾರ್‌ ಚಿರಂಜೀವಿ ಅವರೊಂದಿಗೆ ಅಭಿನಯಿಸಿದ ಅನುಭವವನ್ನು ಹಂಚಿಕೊಳ್ಳುವಂತೆ ಕೇಳಿದ ಪ್ರಶ್ನೆಗೆ, ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರದಲ್ಲಿ ನನ್ನ ಅಭಿನಯವನ್ನು ಗುರುತಿಸಿರುವ ಚಿರಂಜೀವಿ ಅವರು ಸಂದೇಶ ಕಳುಹಿಸುವ ಮೂಲಕ ಶುಭ ಹಾರೈಸಿದ್ದರು. ಇದು ನನಗೆ ಸ್ಫೂರ್ತಿ ನೀಡುತ್ತದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಜ್ಯೂ. ಎನ್‌ಟಿಆರ್‌ ಬಗ್ಗೆ ಒಂದು ಪದದಲ್ಲಿ ಉತ್ತರಿಸುವಂತೆ ಕೇಳಿದ ಪ್ರಶ್ನೆಗೆ ‘ರಿಯಲ್‌’ಎಂದು ಹೇಳಿದ್ದಾರೆ.

ನಟ ಯಶ್‌ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೂಜಾ, ‘ಕೆಜಿಎಫ್‌’ ಚಿತ್ರದ ಮೂಲಕ ಯಶ್‌ ಅವರು ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ತಮಿಳಿನ ಸೂಪರ್ ಸ್ಟಾರ್​​​ ಬಗೆಗಿನ ಪ್ರಶ್ನೆಗೆ ಉತ್ತರಿಸಿರುವ ಅವರು, ಅವರ ಬಗ್ಗೆ ಹೇಳಲು ಒಂದು ಪದವು ಸಾಕಾಗುವುದಿಲ್ಲ. ಆದರೂ ನಾನು ಪ್ರಯತ್ನಿಸುತ್ತೇನೆ. ಸ್ವೀಟೆಸ್ಟ್ ಎಂದು ಬರೆದಿದ್ದಾರೆ.

ಸದ್ಯ ಪೂಜಾ ಅವರು ತೆಲುಗಿನಲ್ಲಿ ‘ರಾಧೆ ಶ್ಯಾಮ್‌’, ‘ಆಚಾರ್ಯ', ಹಿಂದಿಯಲ್ಲಿ ‘ಸರ್ಕಸ್’ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ 2012 ರಲ್ಲಿ ತಮಿಳಿನ ಮುಗಮೂಡಿ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ಬಾಲಿವುಡ್‌ನಲ್ಲಿ, ಅವರು ಮೊಹೆಂಜೊದಾರೊ ಮತ್ತು ಹೌಸ್‌ಫುಲ್ 4 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details