ಮುಂಗಾರು ಮಳೆ ಚಿತ್ರದ ಮೂಲಕ ಚಂದನವನದಲ್ಲಿ ಸದ್ದು ಮಾಡಿದ್ದ ನಟಿ ಪೂಜಾ ಗಾಂಧಿ, ನಂತರದಲ್ಲಿ ಹಲವು ಚಿತ್ರಗಳಲ್ಲಿ ಮಿಂಚಿದ್ದರು. ಆದರೆ, ದಂಡುಪಾಳ್ಯ 3 ಸಿನಿಮಾ ಬಳಿಕ ಮರೆಯಾಗಿದ್ದ ಪೂಜಾ ಗಾಂಧಿ ಇದೀಗ ‘ಸಂಹಾರಿಣಿ’ ಚಿತ್ರದ ಮೂಲಕ ಮತ್ತೆ ತೆರೆಮೇಲೆ ಬರಲು ರೆಡಿಯಾಗಿದ್ದಾರೆ.
ಈ ಸಿನಿಮಾದಲ್ಲಿ ಪೂಜಾ ಗಾಂಧಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟ ಕಿಶೋರ್, ರಾಹುಲ್ ದೇವ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಜವಾಹರ್ ನಿರ್ದೇಶನದ ಈ ಚಿತ್ರವನ್ನ 2ಎಮ್ ಸಿನಿಮಾಸ್ ಸಂಸ್ಥೆಯ ಮುಖಾಂತರ ಶಬರೀಶ್ ಕೆ.ವಿ.ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಸಂಹಾರಿಣಿ ಟ್ರೇಲರ್ ಬಿಡುಗಡೆಯಾಗಲಿದೆ.
ತಮ್ಮ ಪಾತ್ರದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪೂಜಾ, ಸಂಹಾರಿಣಿ ಒಂದು ಸ್ಟ್ರಾಂಗ್ ಆಗಿರೋ ಹೆಣ್ಮಗಳ ಪಾತ್ರ. ಹೆಣ್ಣು ಮಕ್ಕಳ ಭಾವನೆಯನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಸಂಹಾರಿಣಿ ಆ್ಯಕ್ಷನ್ ಜೊತೆ ಭಾವನಾತ್ಮಕವಾದ ಸಿನಿಮಾ ಎಂದರು.