ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ ಮನೆಯಲ್ಲಿ ಪೊಂಗಲ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗಿದೆ. ಮನೆ ಮಂದಿಯಲ್ಲಾ ಟ್ರಡಿಷನಲ್ ಡ್ರೆಸ್ ತೊಟ್ಟು ಹಬ್ಬದಲ್ಲಿ ಮಿಂದೆದ್ದಿದ್ದಾರೆ.
ಹೌದು ನಿನ್ನೆ ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದಂತೆ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವನ್ನು ಆಚರಿಸಲಾಗಿದೆ. ಈ ಹಬ್ಬದಲ್ಲಿ ರಜನಿ ಫ್ಯಾಮಿಲಿ ಎಂಜಾಯ್ ಮಾಡಿದ್ದು, ಫೋಟೋಗಳನ್ನು ತಲೈವಾ ಮಗಳು ಸೌಂದರ್ಯ ರಜನಿಕಾಂತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಲೈವಾ ಮನೆಯಲ್ಲಿ ಅದ್ಧೂರಿಯಾಗಿ ಜರುಗಿತು ಪೊಂಗಲ್ ಆಚರಣೆ! ಹಬ್ಬದಲ್ಲಿ ರಜನಿಕಾಂತ್, ಲತಾ ರಜಿನಿಕಾಂತ್, ರಜನಿ ಪುತ್ರಿ ಸೌಂದರ್ಯ ಹಾಗೂ ಅಳಿಯ ವಿಶಾಗನ್ವನಂಗಮುಡಿ ಭಾಗಿಯಾಗಿದ್ರು. ಈ ವೇಳೆ, ಸೌಂದರ್ಯ ಮತ್ತು ಲತಾ ರಜನಿಕಾಂತ್ ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ತಲೈವಾ ವೈಟ್ ಅಂಟ್ ವೈಟ್ ಬಟ್ಟೆಯಲ್ಲಿ ಕಾಣಿಸಿಕೊಂಡ್ರು.
ತಲೈವಾ ಮನೆಯಲ್ಲಿ ಅದ್ಧೂರಿಯಾಗಿ ಜರುಗಿತು ಪೊಂಗಲ್ ಆಚರಣೆ! ಇನ್ನು ಹಬ್ಬದ ಕ್ಷಣಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಸೌಂದರ್ಯ, ಹ್ಯಾಪಿ ಪೊಂಗಲ್ ಅಂತ ಬರೆದುಕೊಂಡಿದ್ದಾರೆ. ಸೌಂದರ್ಯ ಮತ್ತೊಂದು ಫೋಟೋವನ್ನು ಶೇರ್ ಮಾಡಿದ್ದು, ಅದ್ರಲ್ಲಿ ಹಬ್ಬವನ್ನು ಸಾಂಪ್ರದಾಯಿಕವಾಗಿ, ಕುಟುಂಬ ಸಮೇತರಾಗಿ ಆಚರಿಸಲಾಗುತ್ತಿದೆ.