ಕರ್ನಾಟಕ

karnataka

ETV Bharat / sitara

ಸುದೀಪ್​​ ನೋಡಲು ಮುಗಿಬಿದ್ದ ಅಭಿಮಾನಿಗಳು : ಪೊಲೀಸರಿಂದ ಲಾಠಿ ರುಚಿ - ಪೊಲೀಸರಿಂದ ಲಾಠಿ ಚಾರ್ಜ್​​

ನಟನನ್ನು ನೋಡಲು ಅಭಿಮಾನಿಗಳು ವೇದಿಕೆಗೆ ನುಗ್ಗಿದ್ದು, ಇವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕಾರ್ಯಕ್ರಮದ ನಂತರ ಸುದೀಪ್​ ಹೆಲಿಕಾಪ್ಟರ್​​ ಮೂಲಕ ಬೆಂಗಳೂರಿಗೆ ವಾಪಸಾಗಿದ್ದಾರೆ..

ಸುದೀಪ್​​ ನೋಡಲು ಅಭಿಮಾನಿಗಳ ದಂಡು : ಪೊಲೀಸರಿಂದ ಲಾಠಿ ಚಾರ್ಜ್​​
ಸುದೀಪ್​​ ನೋಡಲು ಅಭಿಮಾನಿಗಳ ದಂಡು : ಪೊಲೀಸರಿಂದ ಲಾಠಿ ಚಾರ್ಜ್​​

By

Published : Feb 9, 2021, 6:50 PM IST

Updated : Feb 9, 2021, 7:03 PM IST

ದಾವಣಗೆರೆ :ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್‌ ಆಗಮಿಸಿದ್ದರಿಂದ ಸೆಲ್ಫಿಗಾಗಿ ವೇದಿಕೆಗೆ ನುಗ್ಗಿದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಸುದೀಪ್​​ ನೋಡಲು ಮುಗಿಬಿದ್ದ ಅಭಿಮಾನಿಗಳು : ಪೊಲೀಸರಿಂದ ಲಾಠಿ ರುಚಿ

ಜಾತ್ರೆಯಲ್ಲಿ ನಟ ಸುದೀಪ್​​ಗೆ ವಾಲ್ಮೀಕಿ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬಳಿಕ ಕಿಚ್ಚನ ಜೊತೆ ಸೆಲ್ಫಿಗಾಗಿ ಅಭಿಮಾನಿಗಳ ದಂಡು ಮುಗಿಬಿದ್ದಿದೆ. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ನಟನನ್ನು ನೋಡಲು ಅಭಿಮಾನಿಗಳು ವೇದಿಕೆಗೆ ನುಗ್ಗಿದ್ದು, ಇವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕಾರ್ಯಕ್ರಮದ ನಂತರ ಸುದೀಪ್​ ಹೆಲಿಕಾಪ್ಟರ್​​ ಮೂಲಕ ಬೆಂಗಳೂರಿಗೆ ವಾಪಸಾಗಿದ್ದಾರೆ. ಜನರ ನೂಕುನುಗ್ಗಲಿನಲ್ಲಿ ವೇದಿಕೆ ಮುಂಭಾಗ ಇದ್ದ ಚೇರುಗಳು ಚೆಲ್ಲಾಪಿಲ್ಲಿಯಾದವು.

Last Updated : Feb 9, 2021, 7:03 PM IST

ABOUT THE AUTHOR

...view details