ಕರ್ನಾಟಕ

karnataka

ETV Bharat / sitara

ನಗ್ನಳಾದ ನಟಿ ಅಮಲಾಗೆ ಎದುರಾಯ್ತು ಸಂಕಷ್ಟ - ತಮಿಳು ಭಾಷೆ

ಇಂದು ಬಿಡುಗಡೆಯಾಗಿರುವ ಆಡೈ ಚಿತ್ರದ ನಟಿ ಅಮಲಾ ಪೌಲ್​ಗೆ ಕಾನೂನಿನ ಕಂಟಕ ಎದುರಾಗಿದೆ. ಈ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿರುವ ಈ ನಟಿಯ ವಿರುದ್ಧ ದೂರು ದಾಖಲಾಗಿದೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ

By

Published : Jul 19, 2019, 9:09 PM IST

ತಮಿಳಿನ ಆಡೈ ಚಿತ್ರದಲ್ಲಿ ನಗ್ನಳಾಗಿ ನಟಿಸಿರುವ ನಟಿ ಅಮಲಾ ಪೌಲ್​ಗೆ ಸಂಕಷ್ಟ ಎದುರಾಗಿದೆ. ಇವರ ವಿರುದ್ಧ ಸಂಸ್ಕೃತಿಗೆ ಧಕ್ಕೆ ತಂದಿರುವ ಆರೋಪ ಕೇಳಿ ಬಂದಿದೆ.

ಕನ್ನಡ ಹೆಬ್ಬುಲಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಅಮಲಾ ಪೌಲ್ ಸದ್ಯ ಆಡೈ ಗುಂಗಿನಲ್ಲಿದ್ದಾರೆ. ತೆಲುಗು ಹಾಗೂ ತಮಿಳು ಭಾಷೆಯ ಈ ಸಿನಿಮಾ ಬಿಡುಗಡೆಯ ಮುನ್ನವೇ ಸಾಕಷ್ಟು ಟಾಕ್ ಶುರು ಮಾಡಿತ್ತು. ಈ ಸಿನಿಮಾ ಮುಖ್ಯಭೂಮಿಕೆಯಲ್ಲಿರುವ ಅಮಲಾ ಕೆಲವೊಂದು ಸೀನ್​​ಗಳಲ್ಲಿ ವಿವಸ್ತ್ರರಾಗಿದ್ದು, ಈಗ ಅದು ಸಂಕಷ್ಟ ತಂದೊಡ್ಡಿದೆ.

ಸೌತ್ ಗೊಂಬೆ ಅಮಲಾ ಬೋಲ್ಡ್ ನಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯ ಈ ನಟಿಯ ವಿರುದ್ಧ ದೂರು ದಾಖಲಾಗಿದೆ. ಅಮಲಾ ಬೆತ್ತಲಾಗಿ ನಟಿಸಿ ಕೆಟ್ಟ ಸಂಸ್ಕೃತಿ ಪ್ರಚಾರ ಮಾಡುತ್ತಿದ್ದಾರೆ ಎಂದು ಅನೈತು ಮಕ್ಕಲ್ ಕಚ್ಚಿ ಪಕ್ಷದ ಸ್ಥಾಪಕಿ ರಾಜೇಶ್ವರಿ ಪ್ರಿಯಾ ನಿನ್ನೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ನಟಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವ ಪ್ರಿಯಾ, ಈ ಚಿತ್ರದಲ್ಲಿರುವ ಅಶ್ಲೀಲ ದೃಶ್ಯಗಳು ಯುವಜನಾಂಗದ ಮೇಲೆ ಪ್ರಭಾವ ಬೀರಿ, ರೇಪ್​ನಂತಹ ಕೃತ್ಯಗಳಿಗೆ ಪ್ರಚೋದನೆ ನೀಡಬಹುದು ಎಂದಿದ್ದಾರೆ.

ABOUT THE AUTHOR

...view details