ಕರ್ನಾಟಕ

karnataka

ETV Bharat / sitara

ಸೆಂಚುರಿ ಸ್ಟಾರ್ ಹೊಸ ಚಿತ್ರಕ್ಕೆ ಪೊಲೀಸ್ ಕಮಿಷನರ್ ಭಾಸ್ಕರ್​ ರಾವ್​ ಕ್ಲಾಪ್ - ಕನ್ನಡ ಚಿತ್ರರಂಗ

ಮಾಸ್ ಟೈಟಲ್ ಹೊಂದಿರುವ ಆರ್ ಡಿ ಎಕ್ಸ್ ಸಿನಿಮಾ ಪೊಲೀಸರ ಕಥೆ ಆಧರಿಸಿರೋ ಚಿತ್ರವಂತೆ. ಹೀಗಾಗಿ, ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಶಿವಣ್ಣನ ಚಿತ್ರದ ಕ್ಯಾಮರಾಗೆ ಚಾಲನೆ ನೀಡಿದ್ರು.

Police Commissioner Clap for Century Star's new film
ಶಿವರಾಜ್​ ಕುಮಾರ್​ ಹೊಸ ಸಿನಿಮಾ

By

Published : Feb 19, 2020, 7:03 PM IST

ಕನ್ನಡ ಚಿತ್ರರಂಗದಲ್ಲಿ ಎನರ್ಜಿ ಹೀರೋ ಅಂತಾ ಅಂದಾಗ, ಎಲ್ಲರ ಕಣ್ಮುಂದೆ ಬರೋದು ಹ್ಯಾಟ್ರಿಕ್ ಹೀರೋ ಶಿವರಾಜ್. ಸದ್ಯ ಭಜರಂಗಿ 2 ಸಿನಿಮಾ ಶೂಟಿಂಗ್ ಮಧ್ಯೆ, ಶಿವರಾಜ್ ಕುಮಾರ್ ಹೊಸ ಚಿತ್ರ ಆರ್ ಡಿ ಎಕ್ಸ್ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿತು.

ಮಾಸ್ ಟೈಟಲ್ ಹೊಂದಿರುವ ಆರ್ ಡಿ ಎಕ್ಸ್ ಸಿನಿಮಾ ಪೊಲೀಸರ ಕಥೆ ಆಧರಿಸಿರೋ ಚಿತ್ರವಂತೆ. ಹೀಗಾಗಿ, ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಶಿವಣ್ಣನ ಚಿತ್ರದ ಕ್ಯಾಮರಾಗೆ ಚಾಲನೆ ನೀಡಿದ್ರು.

ಶಿವರಾಜ್​ ಕುಮಾರ್​ ಹೊಸ ಸಿನಿಮಾ

ಆರ್ ಡಿಎಕ್ಸ್ ಅಂದ್ರೆ, ರಾಬರ್ಟ್ ಡೇನಿಯಲ್ ಜೇವಿಯರ್ ಅಂತೆ. ಮತ್ತೆ ಟಗರು ಹಾಗು ರುಸ್ತುಂ ಸಿನಿಮಾ ನಂತ್ರ ಶಿವರಾಜ್ ಕುಮಾರ್ ಸೂಪರ್ ಕಾಪ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಬ್ಜೆಕ್ಟ್ ರಾ ಸ್ಟೈಲ್ ನಲ್ಲಿರುವ ಕಾರಣ, ಈ ಹಿಂದಿನ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಬೇರೆ ಸ್ಟೈಲ್ ನಲ್ಲಿ ಪೊಲೀಸ್ ಕಾಪ್ ಆಗಿ ಕಾಣ್ತಾರಂತೆ ಸೆಂಟುರಿ ಸ್ಟಾರ್​.

ಈ ಚಿತ್ರಕ್ಕೆ ಶರವಣ ಅಭಿಮನ್ಯು ಕ್ಯಾಮರಾ ವರ್ಕ್ ಮಾಡುತ್ತಿದ್ದು, ಟಗರು ಚಿತ್ರದ ನಂತ್ರ ಚರಣ್ ರಾಜ್ ಮತ್ತೆ ಶಿವರಾಜ್ ಕುಮಾರ್ ಸಿನಿಮಾಕ್ಕೆ ಮ್ಯೂಸಿಕ್ ಕಂಪೋಜ್ ಮಾಡಲಿದ್ದಾರೆ.

ABOUT THE AUTHOR

...view details