ಕರ್ನಾಟಕ

karnataka

ETV Bharat / sitara

ಸಿಲಿಂಡರ್​ ಬ್ಲಾಸ್ಟ್​ ಪ್ರಕರಣ: ನಟ ಚೇತನ್​ ಪೊಲೀಸರ ವಶಕ್ಕೆ - ರಣಂ

ನಾನು ಎರಡು ದಿನ ಶೂಟಿಂಗ್ ನಲ್ಲಿ ಭಾಗಿಯಾಗಿದ್ದೆಇವತ್ತು ನನ್ನ ಶೂಟಿಂಗ್ ಸೀನ್ ಇರಲಿಲ್ಲ ಕಾರ್ ಬ್ಲಾಸ್ಟ್ ಸೀನ್ ಇದೆ ಅಂತ ಗೊತ್ತಿತ್ತು ಅಷ್ಟೆ ಎಂದು ನಟ ಚೇತನ್ ಪ್ರತಿಕ್ರಿಯೆ ನೀಡಿದ್ಧಾರೆ.

ನಟ ಚೇತನ್​

By

Published : Mar 29, 2019, 7:21 PM IST

ಬೆಂಗಳೂರು: ರಣಂ ಚಿತ್ರದ ಶೂಟಿಂಗ್​ ವೇಳೆ ಸಂಭವಿಸಿದ ಸಿಲಿಂಡರ್​ ಸ್ಫೋಟದಿಂದ ತಾಯಿ ಮಗಳು ಸಾವಿಗೀಡಾದ ಪ್ರಕರಣ ಸಂಬಂಧ ಚಿತ್ರ ನಟ ಚೇತನ್​ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಸಂಭವಿಸಿದ ಬೆನ್ನಲ್ಲೇ ಚಿತ್ರತಂಡ ಸ್ಥಳದಿಂದ ಪರಾರಿಯಾಗಿದ್ದು, ನಟ ಚೇತನ್​ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹೆಚ್ಚಿನ ಓದಿಗಾಗಿ:

ಚಿರಂಜೀವಿ ಸರ್ಜಾ ನಟನೆಯ 'ರಣಂ' ಚಿತ್ರದ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟ: ತಾಯಿ, ಮಗು ಸಾವು

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ನಟ ಚೇತನ್​,ನನಗೆ ತುಂಬಾ ಬೇಸರ ಆಗಿದೆ, ನಾವು ಮೃತರ ಕುಟುಂಬದ ನೆರವಿಗೆ ನಿಲ್ಲುತ್ತೇವೆ. ನಾನು ಎರಡು ದಿನ ಶೂಟಿಂಗ್ ನಲ್ಲಿ ಭಾಗಿಯಾಗಿದ್ದೆಇವತ್ತು ನನ್ನ ಶೂಟಿಂಗ್ ಸೀನ್ ಇರಲಿಲ್ಲ ಕಾರ್ ಬ್ಲಾಸ್ಟ್ ಸೀನ್ ಇದೆ ಅಂತ ಗೊತ್ತಿತ್ತು ಅಷ್ಟೆ. ಇನ್ನೊಂದು ಮಗು ಆಸ್ಪತ್ರೆ ಯಲ್ಲಿದೆ ನಾನು ಹೋಗಿ ನೋಡ್ತೇನೆ ಎಂದಿರುವ ಚೇತನ್​​​, ಘಟನೆ ನಡೆದ ಮೇಲೆ ಚಿತ್ರತಂಡ ಓಡಿ ಹೋಗಿದ್ದನ್ನು ಖಂಡಿಸಿದ್ದಾರೆ.

ABOUT THE AUTHOR

...view details