ತಮಿಳು ನಟ ವಿಜಯ್ ಇದೀಗ 'ಬಿಗಿಲ್' ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಕಳೆದ ವಾರ ಬಿಡುಗಡೆಯಾದ ಸಿನಿಮಾ ಇದುವರೆಗೂ ಸುಮಾರು 100 ಕೋಟಿ ರೂಪಾಯಿಯಷ್ಟು ಲಾಭ ಮಾಡಿದೆ.
ಬಿಗಿಲ್ ಸಿನಿಮಾ ಟಿಕೆಟ್ ಸಿಗದ ಸಿಟ್ಟಿಗೆ ವಿಜಯ್ ಮನೆಗೇ ಬಾಂಬ್... ಹುಸಿ ಕರೆಗೆ ಬೆವರಿದ ಪೊಲೀಸರು!
'ಬಿಗಿಲ್' ಸಿನಿಮಾಗೆ ಟಿಕೆಟ್ ದೊರೆಯದ ಕಾರಣ ಕೋಪಗೊಂಡು ಅರುಣ್, ಪೊಲೀಸರಿಗೆ ವಿಜಯ್ ಮನೆಗೆ ಬಾಂಬ್ ಇರಿಸಲಾಗಿದೆ ಎಂದು ಕರೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಅರುಣ್ ಮೇಲೆ ಕೇಸ್ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇನ್ನು ಸಿನಿಮಾ ಬಿಡುಗಡೆಯಾದ ಮರುದಿನ ಚೆನ್ನೈ ಸಿಟಿ ಪೊಲೀಸ್ ಕಂಟ್ರೋಲ್ ರೂಮ್ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ದಳಪತಿ ವಿಜಯ್ ಮನೆ ಮೇಲೆ ಬಾಂಬ್ ಇರಿಸಲಾಗಿದ್ದು ಅದು ಕೆಲವೇ ನಿಮಿಷದಲ್ಲಿ ಬ್ಲ್ಯಾಸ್ಟ್ ಆಗಲಿದೆ ಎಂದು ಹೇಳಿದ್ದ. ಈ ಕರೆ ಪೊಲೀಸರಿಗೆ ತಲೆನೋವಾಗಿ ಪರಿಣಿಮಿಸಿತ್ತು. ಕೂಡಲೇ ವಿಜಯ್ ಮನೆಗೆ ಓಡಿದ ಪೊಲೀಸ್ ಹಾಗೂ ಬಾಂಬ್ ನಿಷ್ಕ್ರಿಯ ದಳ ಎಲ್ಲೆಡೆ ಹುಡುಕಾಡಿದ್ದಾರೆ. ಕೊನೆಗೆ ಇದೊಂದು ಹುಸಿ ಕರೆ ಎಂದು ತಿಳಿದು ನಿಟ್ಟುಸಿರುಬಿಟ್ಟಿದ್ದಾರೆ. ನಂತರ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಹುಸಿ ಕರೆ ಮಾಡಿದ ಅರುಣ್ ಎಂಬಾತನನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. 'ಬಿಗಿಲ್' ಸಿನಿಮಾಗೆ ಟಿಕೆಟ್ ದೊರೆಯದ ಕಾರಣ ಕೋಪಗೊಂಡು ಅರುಣ್, ಪೊಲೀಸರಿಗೆ ಈ ಕರೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಅರುಣ್ ಮೇಲೆ ಕೇಸ್ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.