ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ ಆರೋಪಿ ರಾಕೇಶ್ ವಿರಾಟ್ ನನ್ನ ಈಗಾಗ್ಲೇ ಸಿಸಿಬಿ, ಸೈಬರ್ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಹಾಗೆಯೇ ಈತನ ಹಿನ್ನೆಲೆ, ಈತನ ಹಿಂದೆ ಯಾರಾದ್ರು ಇದ್ದಾರ ಅನ್ನೋದ್ರ ತನಿಖೆ ಕೈಗೆತ್ತಿಕೊಂಡಿರುವ ಸೈಬರ್ ಪೊಲೀಸರಿಗೆ ಹಲವಾರು ರೋಚಕ ಕಹಾನಿಗಳು ಬೆಳಕಿಗೆ ಬಂದಿವೆ.
ರಾಕೇಶ್, ದರ್ಶನ್ ಅಭಿಮಾನಿಯಾಗಿದ್ದು ಈತ ತಾನು ಫೇಸ್ ಬುಕ್ ನಲ್ಲಿ ದರ್ಶನ್ ಅಭಿಮಾನಿ ಎಂದು ಸ್ಟೇಟಸ್ ಹಾಕಿಕೊಂಡಿದ್ದ. ಹೀಗಾಗಿ ಇದರ ಜಾಡು ಹಿಡಿದ ಸೈಬರ್ ಪೊಲೀಸರಿಗೆ ಪೈಲ್ವಾನ್ ಪೈರಸಿ ಹಿಂದೆ ಹಲವರ ಕೈವಾಡ ಇರುವುದು ಗೊತ್ತಾಗಿದೆ.
ಹೀಗಾಗಿ ಇದರ ಜಾಡು ಹಿಡಿದ ಸೈಬರ್ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಸೈಬರ್ ಮೂಲಗಳ ಪ್ರಕಾರ ರಾಕೇಶ್ ವಿರಾಟ್ ಜೊತೆ ಹಲವಾರು ಮಂದಿ ಸಿನಿಮಾ ಪೈರಸಿ ಮಾಡಿರುವ ಸಾಧ್ಯತೆ ಇದ್ದು ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎಂದಿದ್ದಾರೆ.
ಇನ್ನು ಕಳೆದ 12 ರಂದು ಪಂಚಭಾಷೆಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸುಮಾರು 3 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಂಡಿತ್ತು. ಅಲ್ಲದೆ ಸಿನಿಮಾ ಬಿಡುಗಡೆಯ ದಿನವೇ ಪೈರಸಿಯಾಗಿತ್ತು. ಹೀಗಾಗಿ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.