ಕೊರೊನಾ ಬಳಿಕ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಬಹು ನಿರೀಕ್ಷೆಯ ಸಿನಿಮಾ 'ಪೊಗರು' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಫೆಬ್ರವರಿ 19 ರಂದು ಬಿಡುಗಡೆಯಾದ ಸಿನಿಮಾ ವಿವಾದದ ನಡುವೆಯೂ ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದೆ. ಮೊದಲ ದಿನವೇ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ವಿವಾದದ ನಡುವೆಯೂ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ 'ಪೊಗರು'....ಇದುವರೆಗೂ ಮಾಡಿದ ಕಲೆಕ್ಷನ್ ಎಷ್ಟು...?
ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಅಭಿನಯಿಸಿರುವ 'ಪೊಗರು' ಸಿನಿಮಾ ಇದುವರೆಗೆ 45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ಇಷ್ಟು ಮೊತ್ತ ಕಲೆಕ್ಷನ್ ಮಾಡುವ ಮೂಲಕ ಹಳೆ ಸಿನಿಮಾ ದಾಖಲೆ ಮುರಿದಿದೆ ಎಂದು ಧ್ರುವ ಸರ್ಜಾ ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮೊದಲ ಬಾರಿಗೆ ಮಾಲಿವುಡ್ಗೆ ಹಾರಿದ ಶಾನ್ವಿ...ನಾಯಕ ಯಾರು ಗೊತ್ತಾ...?
'ಪೊಗರು' ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ 5-6 ದಿನಗಳಿಂದ ರಾಜ್ಯಾದ್ಯಂತ ಬ್ರಾಹ್ಮಣ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚಿತ್ರದ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೂಡಾ ಇದೆ. ಈ ವಿವಾದದ ನಡುವೆಯೂ 'ಪೊಗರು' ಮೊದಲ ದಿನವೇ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದುವರೆಗೂ ಒಟ್ಟು 46 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ಬಿ.ಕೆ. ಗಂಗಾಧರ್ ಹಾಗೂ ಧ್ರುವ ಸರ್ಜಾ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ಕಲೆಕ್ಷನ್ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ 'ಪೊಗರು' ಇಷ್ಟ ಕಲೆಕ್ಷನ್ ಮಾಡಿರುವುದು ಖುಷಿ ನೀಡಿದೆ. ಇದು ಹಿಂದಿನ ಸಿನಿಮಾಗಳ ದಾಖಲೆ ಮುರಿದಿದೆ ಎಂದು ಹೇಳಿದ್ದಾರೆ.