ಕರ್ನಾಟಕ

karnataka

ETV Bharat / sitara

ಖದರ್‌ ತೋರಿಸೋಕೆ ಬರ್ತಿದೆ 'ಪೊಗರು', ಚಿತ್ರದ ರಿಲೀಸ್​​​​ ಡೇಟ್ ಫಿಕ್ಸ್?​​​ - druva sarja

ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರ  ಡಿಸೆಂಬರ್ 24 ಅಥವಾ ಜನವರಿ 16, 2020ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.

ಪೊಗರು ಚಿತ್ರದ ರಿಲೀಸ್​ ಡೇಟ್​ ಫೀಕ್ಸ್​​

By

Published : Oct 15, 2019, 3:57 PM IST

ಕನ್ನಡದಲ್ಲಿ ಹ್ಯಾಟ್ರಿಕ್ ಬಾರಿಸಿ ಮುನ್ನುಗ್ಗುತ್ತಿರುವ ನಾಯಕ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರ ಡಿಸೆಂಬರ್ 24 ಅಥವಾ ಜನವರಿ 16, 2020ರಂದು ತೆರೆಗೆ ಬರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಎಸ್‌ಆರ್‌ವಿ ಸಭಾಂಗಣಕ್ಕೆ ‘ಮುತ್ತುಕುಮಾರ’ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ನಿರ್ದೇಶಕ ನಂದ ಕಿಶೋರ್ ಚಿತ್ರದ ಬಗ್ಗೆ ಮಾತಾನಾಡಿದರು.

ಈ ವೇಳೆ ತಮ್ಮ ಮೊಬೈಲ್​​​ನಲ್ಲಿ ಡೈಲಾಗ್‌ ಟ್ರೈಲರ್ ತೋರಿಸಿ​​, ಧ್ರುವ ಸರ್ಜಾ 40 ಕೆಜಿ ತೂಕ ಕಡಿಮೆ ಮಾಡಿಕೊಂಡು 16 ವರ್ಷದ ಹುಡುಗನ ರೀತಿ ಕಾಣುತ್ತಿದ್ದಾರೆ. 40 ಕೆಜಿ ತೂಕ ಇಳಿಸಿಕೊಂಡ ಮೇಲೆ ಸದ್ಯದ ಲುಕ್ಕಿಗೆ ತಲುಪಲು ಅವರು ಬಹಳ ಕಷ್ಟಪಟ್ಟಿದ್ದಾರೆ ಎಂದು ಹೇಳಿದ್ರು.

‘ಪೊಗರು’ ಚಿತ್ರದ ಕೆಲಸಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ಚಿತ್ರದ ಎರಡೂವರೆ ನಿಮಿಷದ ಡೈಲಾಗ್ ಟ್ರೈಲರ್ 24 ರಂದು ಬಿಡುಗಡೆಯಾಗುತ್ತಿದ್ದು, ಅದರಲ್ಲಿ ಚಿತ್ರದ ಕೆಲವು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ರು.

ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 1970 ದಶಕದ ‘ನಾಗರಹಾವು’ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರರ (ಡಾ.ಕೆ ಎಸ್ ಅಶ್ವಥ್) ರೀತಿ ಕಾಣುವ ಅವರ ಪಾತ್ರ ವಿಶೇಷವಾಗಿದೆ ಎಂದು ಹೇಳುತ್ತಾ ಕುತೂಹಲ ಹೆಚ್ಚಿಸಿದ್ರು.

ABOUT THE AUTHOR

...view details