ಪೊಗರು ಎರಡು ವರ್ಷದಿಂದ ಸ್ಯಾಂಡಲ್ ವುಡ್ನಲ್ಲಿ ಹೆಚ್ಚು ಸುದ್ದಿ ಆಗುತ್ತಿರುವ ಸಿನಿಮಾ. ಭರ್ಜರಿ ನಂತರ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ, ಕರಾಬು ಹಾಡು ಫೈನಲಿ ರಿಲೀಸ್ ಆಗಿದೆ.
ಮಾರ್ಚ್ 27ಕ್ಕೆ ರಿಲೀಸ್ ಆಗಬೇಕಿದ್ದ ಕರಾಬು ಹಾಡು, ಕೊರೊನಾ ಎಫೆಕ್ಟ್ನಿಂದಾಗಿ ರಿಲೀಸ್ ಆಗಿರಲಿಲ್ಲ. ಗುರುವಾರ ಶ್ರೀರಾಮನವಮಿ ಹಬ್ಬದ ನಿಮಿತ್ತ ಪೊಗರು ಚಿತ್ರತಂಡ ಈ ಕರಾಬು ಹಾಡನ್ನ ಲಾಂಚ್ ಮಾಡಿದೆ. ಎರಡು ವರ್ಷ ಆದ್ಮಲೇ ಅಣ್ಣಾ ಬರ್ತಾರೆ ಎಲ್ಲಾರು ಸೈಡಿಗೆ ಹೋಗ್ರೋ ಎನ್ನುವ ಮೂಲಕ ಹಾಡು ಶುರುವಾಗುತ್ತದೆ.