'ಪಿಎಂ ನರೇಂದ್ರ ಮೋದಿ' ಜೀವನಾಧಾರಿತ ಸಿನಿಮಾದ ಎರಡೂವರೆ ನಿಮಿಷದ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯುಟ್ಯೂಬ್ ಟ್ರೆಂಡಿಂಗ್ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ ಈ ಟ್ರೇಲರ್ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ.
ಮೋದಿ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸಿದ್ದು, ಪ್ರಧಾನಿ ಪಾತ್ರಕ್ಕೆ ಸಾಕಷ್ಟು ವರ್ಕೌಟ್ ಮಾಡಿದ್ದಾರಂತೆ. ಪ್ರತಿನಿತ್ಯ ನಸುಕಿನಜಾವ 2 ಗಂಟೆಗೆ ಎದ್ದು ಬರೋಬ್ಬರಿ ಎಂಟು ಗಂಟೆಗಳ ಕಾಲ ಮೇಕಪ್ಗಾಗಿ ಸಮಯ ವ್ಯಯಿಸುತ್ತಿದ್ದರಂತೆ.
ಆರ್ಎಸ್ಎಸ್ ದಿನಗಳು, ಗುಜರಾತ್ ಮುಖ್ಯಮಂತ್ರಿಯಾಗಿದ್ದು, ನಂತರದಲ್ಲಿ ಪ್ರಧಾನಿಯಾಗಿ ಹೆಸರು ಮಾಡಿದ್ದು..ಹೀಗೆ ಅವರ ಜೀವನದ ಪ್ರಮುಖ ಘಟ್ಟಗಳನ್ನು ಸಿನಿಮಾ ಒಳಗೊಂಡಿದೆ.
ಖ್ಯಾತ ಉದ್ಯಮಿ ರತನ್ ಟಾಟಾ ಪಾತ್ರದಲ್ಲಿ ಬೊಮನ್ ಇರಾನಿ, ಮನೋಜ್ ಜೋಶಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೈಟ್.
ಮೋದಿ ಬಯೋಪಿಕ್ ಗುಜರಾತ್, ಉತ್ತರಾಖಂಡ ಹಾಗೂ ಮುಂಬೈನಲ್ಲಿ ಚಿತ್ರೀಕರಣವಾಗಿದೆ. ಇನ್ನು ಈ ಚಿತ್ರ ಎಪ್ರಿಲ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.