ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ನಂತರ ಕೆಲವು ದಿನಗಳಿಂದ ಸ್ಯಾಂಡಲ್ವುಡ್ನಲ್ಲಿ ಯಾವುದೇ ಸಿನಿಮಾಗೆ ಪೈರಸಿ ಮಾತು ಕೇಳಿ ಬಂದಿರಲಿಲ್ಲ. ಇದೀಗ ದುನಿಯಾ ಸೂರಿ ನಿರ್ದೇಶನದಲ್ಲಿ ಡಾಲಿ ಧನಂಜಯ್ ಅಭಿನಯಿಸಿರುವ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ಪೈರಸಿ ಕಾಟ ಆರಂಭವಾಗಿದೆ.
'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರಕ್ಕೆ ಶುರುವಾಯ್ತು ಪೈರಸಿ ಕಾಟ - Piracy problem for Popcorn monkey tiger movie
'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದ ಮೊದಲ ದಿನದ ಗಳಿಕೆ 2.5 ಕೋಟಿ ಎಂದು ತಿಳಿಯುತ್ತಿದ್ದಂತೆ ಪೈರಸಿ ಆರಂಭವಾಗಿದೆ. ಚಿತ್ರದಲ್ಲಿ ದುನಿಯಾ ಸೂರಿ ನಟರಿಗೆ ಇಟ್ಟಿರುವ ವಿಚಿತ್ರ ಹೆಸರು, ಸನ್ನಿವೇಶಗಳು ಹಾಗೂ ಕೆಲವೊಂದು ಸಂಭಾಷಣೆಗಳು ಯುವಜನತೆಗೆ ಬಹಳ ಇಷ್ಟವಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ದುಷ್ಕರ್ಮಿಗಳು ಪೈರಸಿ ಆರಂಭಿಸಿದ್ದಾರೆ.
ಮೊದಲ ದಿನದ ಗಳಿಕೆ 2.5 ಕೋಟಿ ಎಂದು ತಿಳಿಯುತ್ತಿದ್ದಂತೆ ಪೈರಸಿ ಆರಂಭವಾಗಿದೆ. ಚಿತ್ರದಲ್ಲಿ ದುನಿಯಾ ಸೂರಿ ನಟರಿಗೆ ಇಟ್ಟಿರುವ ವಿಚಿತ್ರ ಹೆಸರು, ಸನ್ನಿವೇಶಗಳು ಹಾಗೂ ಕೆಲವೊಂದು ಸಂಭಾಷಣೆಗಳು ಯುವಜನತೆಗೆ ಬಹಳ ಇಷ್ಟವಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ದುಷ್ಕರ್ಮಿಗಳು ಪೈರಸಿ ಆರಂಭಿಸಿದ್ದಾರೆ. ಜೊತೆಗೆ ಕೆಲವೊಂದು ಸಂಭಾಷಣೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೂಡಾ ಹರಿದಾಡುತ್ತಿದೆ. ಇದರಿಂದ ಚಿತ್ರದ ಗಳಿಕೆಗೆ ಹೊಡೆತ ಬಿದ್ದಿರುವುಂದಂತೂ ನಿಜ. ಇದೀಗ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಪೈರಸಿ ಬಗ್ಗೆ ಮಾಧ್ಯಮಗಳ ಮುಂದೆ ಬೇಸರ ಹಂಚಿಕೊಂಡಿದೆ.
ಇದುವರೆಗೂ ‘ತಮಿಳು ಹ್ಯಾಕರ್ಸ್’ ಪೈರಸಿ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈಗ ‘ಟೆಲಿಗ್ರಾಮ್’ ರೂಪದಲ್ಲಿ ಕನ್ನಡ ಚಿತ್ರರಂಗಕ್ಕೆ ಪೈರಸಿ ಕಾಟ ಕೊಡುತ್ತಿದೆ. ಟೆಲಿಗ್ರಾಂನಲ್ಲಿ ಕನ್ನಡ ಅಷ್ಟೇ ಅಲ್ಲ ವಿವಿಧ ಭಾಷೆಗಳ ಸಿನಿಮಾಗಳು ಪೈರಸಿ ಆಗುತ್ತಿವೆ. ಒಳ್ಳೆ ಗಳಿಕೆ ಇರುವ ಸಿನಿಮಾಗಳಿಗೆ ಎರಡನೇ ದಿನದಿಂದಲೇ ಪೈರಸಿ ಆರಂಭವಾಗಿಬಿಡುತ್ತಿದೆ. ಇದು ಭಾರತೀಯ ಮೂಲಕ ಆ್ಯಪ್ಆಗಿದ್ದು 2013 ರಲ್ಲಿ ಬಿಡುಗಡೆಯಾಗಿದೆ. ಕೋಟ್ಯಂತರ ಮಂದಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ.