ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಪೆಟ್ರೊಮ್ಯಾಕ್ಸ್ ಸಿನಿಮಾ ಥಿಯೇಟರ್ಗೆ ಬರಲಿದೆ. ಇದೊಂದು ಅತ್ಯುತ್ತಮ ಕಾಮಿಡಿ ಸಿನಿಮಾ ಎಂದು ಚಿತ್ರತಂಡ ಹೇಳಿದೆ.
ಪೆಟ್ರೋಮ್ಯಾಕ್ಸ್ ಚಿತ್ರತಂಡದ ಮಾತು ಮೈಸೂರಿನ ಖಾಸಗಿ ಕ್ಲಬ್ವೊಂದರಲ್ಲಿ ಮಾತನಾಡಿದ ಚಿತ್ರತಂಡ, 36 ದಿನಗಳಲ್ಲಿ ಮೈಸೂರಿನಲ್ಲಿ ಚಿತ್ರೀಕರಣ ಮುಗಿದಿದೆ. ನಾಲ್ವರು ಅನಾಥರ ಪಾತ್ರದ ಮೂಲಕ ಚಿತ್ರ ಮೂಡಿಬಂದಿದೆ. ನಿರ್ದೇಶಕ ವಿಜಯಪ್ರಸಾದ್ ಹಾಗೂ ಕ್ಯಾಮರಾಮೆನ್ ನಿರಂಜನಬಾಬು ಸಖತ್ ವರ್ಕ್ ಮಾಡಿದ್ದಾರೆ. ಮೈಸೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿನಿಮಾ ಶೂಟಿಂಗ್ ಆಗಿದೆ ಎಂದು ನಟ ನೀನಾಸಂ ಸತೀಶ್ ಹೇಳಿದ್ದಾರೆ.
ನಟಿ ಹರಿಪ್ರಿಯ ಮಾತನಾಡಿ, ನಾನು ಈ ಸಿನಿಮಾದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಪಾತ್ರ ಮಾಡಿದ್ದೇನೆ. ಇದೊಂದು ತರಹ ಹೊಸ ಚಾಲೆಂಜ್. ಚೇಷ್ಟೆಗಳ ಮೂಲಕ ಕೊಟ್ಟಿರುವ ಪಾತ್ರ ನಿರ್ವಹಿಸಿದ್ದೀನಿ ಎಂದರು.
ನಿರ್ದೇಶಕ ವಿಜಯಪ್ರಸಾದ್ ಮಾತನಾಡಿ, ಎಲ್ಲವನ್ನು ಡಬಲ್ ಮಿನಿಂಗ್ನಲ್ಲಿ ಹೇಳಲಾಗಿಲ್ಲ. ಕಾಮಿಡಿ ಮತ್ತು ಬದುಕಿನ ಸತ್ಯಗಳನ್ನು ಹೇಳಲಾಗಿದೆ. ಎಲ್ಲವನ್ನು ಡಬಲ್ ಮೀನಿಂಗ್ ಅಲ್ಲಿ ಹೇಳಿದರೆ ಜನ ಬರುವುದಿಲ್ಲ. ಸಿನಿಮಾ ಬಿಡುಗಡೆಯಾದಾಗ ಜನ ಇಷ್ಟಪಡುತ್ತಾರೆ ಎಂದರು.
ನಟಿ ಕಾರುಣ್ಯ ರಾಮ್ ಚಿತ್ರದ ಬಗೆಗೆ ತಮ್ಮ ಅಭಿಪ್ರಾಯ ಹಂಚಿಕೊಡರು. ನಟಿ ವಿಜಯಲಕ್ಷ್ಮಿ ಸಿಂಗ್, ಸಹ ನಿರ್ದೇಶಕ ನಾಗಭೂಷಣ್ ,ಕ್ಯಾಮರಾಮನ್ ನಿರಂಜನಬಾಬು, ಬಾಲನಟಿ ಭುವಿ ಮತ್ತಿತರರು ಇದ್ದರು.