ಕರ್ನಾಟಕ

karnataka

ETV Bharat / sitara

ಚಿತ್ರಮಂದಿರಗಳಲ್ಲಿ ಶೇಕಡಾವಾರು ನಿಯಮ.. ಇದರಿಂದ ಕನ್ನಡ ಚಿತ್ರರಂಗದ ಅಭಿವೃದ್ಧಿ ಸಾಧ್ಯವೇ? - ಚಿತ್ರಮಂದಿರಗಳಲ್ಲಿ ಬರಲಿದೆ ಶೇಕಡವಾರು ನಿಯಮ

ಸದ್ಯ ಚಿತ್ರಮಂದಿರಗಳಲ್ಲಿ ಶೇಕಡಾವಾರು ಪದ್ಧತಿ ಕೇರಳ ಹಾಗೂ ತಮಿಳುನಾಡಿನಲ್ಲಿ ಜಾರಿಯಲ್ಲಿದೆ. ಆದರೆ, ಈ ನಿಮ್ಮ ಕರ್ನಾಟಕದಲ್ಲಿ ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾತ್ರ ಇದ್ದು ಚಿತ್ರಮಂದಿರಗಳಲ್ಲಿ ಬಾಡಿಗೆ ನಿಯಮವಿದೆ. ಇದರಿಂದ ನಿರ್ಮಾಪಕರಿಗೆ ತುಂಬಾ ನಷ್ಟವಾಗ್ತಿದೆ. ಆದ್ದರಿಂದ ಸಿಂಗಲ್ ಸ್ಕ್ರೀನ್‌ಗಳಲ್ಲಿ ಶೇಕಡಾವಾರು ಪದ್ಧತಿ ಅಳವಡಿಕೆಗೆ ಚಿಂತನೆ ಮಾಡಿರುವುದಾಗಿ ನಿರ್ಮಾಪಕರ ಸಂಘ ಹೇಳಿದೆ.

percentage-rule-coming-into-cinemas
ಚಿತ್ರಮಂದಿರಗಳಲ್ಲಿ ಬರಲಿದೆ ಶೇಕಡವಾರು ನಿಯಮ

By

Published : Feb 3, 2020, 11:44 PM IST

ಬೆಂಗಳೂರು:ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ವರ್ಷಕ್ಕೆ 220ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿವೆ. ಆದರೆ, ಅವುಗಳಲ್ಲಿ ಬೆರಳೆಣಿಕೆ ಚಿತ್ರಗಳು ಮಾತ್ರ ನಿರ್ಮಾಪಕರ ಜೇಬು ತುಂಬಿಸುವಲ್ಲಿ ಯಶಸ್ವಿಯಾಗುತ್ತವೆ. ಅದರಲ್ಲೂ ಹೊಸಬರ ಚಿತ್ರಗಳು ಬಿಡುಗಡೆಯಾದರೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಪರದಾಡುತ್ತಾರೆ. ಅಲ್ಲದೆ ಚಿತ್ರಮಂದಿರಗಳಿಗೆ ಮುಂಗಡವಾಗಿ ಬಾಡಿಗೆ ಹಣ ಕಟ್ಟಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ಮಾಪಕರ ಕಷ್ಟಗಳನ್ನು ಗಮನಿಸಿರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ನಿರ್ಮಾಪಕರ ನೆರವಿಗೆ ಬರಲು ಧಾವಿಸಿದೆ.

ಚಿತ್ರಮಂದಿರಗಳಲ್ಲಿ ಬರಲಿದೆ ಶೇಕಡಾವಾರು ನಿಯಮ..

ಇತ್ತೀಚಿಗಷ್ಟೇ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ್ ಕುಮಾರ್ ಸ್ವಲ್ಪ ಆ್ಯಕ್ಟಿವ್ ಆಗಿ ಕೆಲಸ ಮಾಡಲು ಶುರುವಾಗಿದೆ. ಕರ್ನಾಟಕ ಚಲನಚಿತ್ರ ರಂಗದಲ್ಲಿ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಮಾಪಕರ ಸಂಘ ಸಿದ್ಧವಾಗಿದೆ. ಚಿತ್ರಮಂದಿರಗಳಲ್ಲಿ ಹಳೆಯ ಪದ್ಧತಿ ರದ್ದು ಮಾಡಿ‌ ಮಲ್ಟಿಫ್ಲೆಕ್ಸ್‌ಗಳ ರೀತಿ, ಶೇಕಡಾವಾರು ನಿಯಮ ಜಾರಿಗೆ ತರಲು ಚಿಂತಿಸಿದೆ. ಈ ವಿಚಾರವಾಗಿ ಇಂದು ನಿರ್ಮಾಪಕರ ಸಂಘದ ಕಚೇರಿಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಪತ್ರಿಕಾಗೋಷ್ಠಿ ಕರೆದು, ಕನ್ನಡ ನಿರ್ಮಾಪಕರ ಉಳಿವಿನ ದೃಷ್ಟಿಯಿಂದ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಶೇಕಡವಾರು ನಿಯಮ ಜಾರಿಗೆ ತರಲು ಚಿಂತಿಸಿದ್ದೇವೆ ಎಂದರು.

ಈ ನಿಯಮವನ್ನು ಏಪ್ರಿಲ್ 2ನೇ ತಾರೀಖಿನಿಂದ ಜಾರಿಗೆ ತರಲು ನಿರ್ಮಾಪಕರ ಸಂಘ ನಿರ್ಧರಿಸಿದೆ. ಇದನ್ನ ಜಾರಿಗೆ ತರಲು ಒಂದು ಸಮಿತಿ ರಚಿಸಲು ನಿರ್ಮಾಪಕರ ಸಂಘ ತೀರ್ಮಾನಿಸಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳ ದುಬಾರಿ ಬಾಡಿಗೆಯಿಂದ ನಿರ್ಮಾಪಕರಿಗೆ ತುಂಬಾ ನಷ್ಟವಾಗುತ್ತಿದೆ. ಹೀಗಾಗಿ ನಿರ್ಮಾಪಕರ ಹಿತದೃಷ್ಟಿಯಿಂದ ಈ ನಿಯಮ ಜಾರಿಗೆ ತರಲು ತೀರ್ಮಾನಿಸಿದ್ದೇವೆ. ಇದರಿಂದ ಕನ್ನಡ ಚಿತ್ರರಂಗವೂ ಅಭಿವೃದ್ಧಿಯಾಗಲಿದೆ. ಸದ್ಯ ಮಲ್ಟಿಫ್ಲೆಕ್ಸ್‌ಗಳಲ್ಲೂ ಕೂಡ ಶೇಕಡವಾರು ಪದ್ಧತಿ ಇದೆ. ಸದ್ಯ ಮಲ್ಟಿಫ್ಲೆಕ್ಸ್‌ಗಳಲ್ಲಿ 50:50 ಅನುಪಾತವಿದೆ. ಇದನ್ನು ನಿರ್ಮಾಪಕರಿಗೆ 55:% ಮಲ್ಟಿಪ್ಲೆಕ್ಸ್ ಮಾಲೀಕರಿಗೆ 45 % ಅನುಪಾತ ಜಾರಿಗೆ ತರಲು ಮಲ್ಟಿಪ್ಲೆಕ್ಸ್​ ಮಾಲೀಕರ ಜೊತೆಯೂ ಸಭೆ ನಡೆಸಿ ಮಾತನಾಡುವುದಾಗಿ ನಿರ್ಮಾಪಕರ ಸಂಘ ತಿಳಿಸಿದೆ.

ಸದ್ಯ ಚಿತ್ರಮಂದಿರಗಳಲ್ಲಿ ಶೇಕಡಾವಾರು ಪದ್ಧತಿ ಕೇರಳ ಹಾಗೂ ತಮಿಳುನಾಡಿನಲ್ಲಿ ಜಾರಿಯಲ್ಲಿದೆ. ಆದರೆ, ಈ ನಿಮ್ಮ ಕರ್ನಾಟಕದಲ್ಲಿ ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾತ್ರ ಇದ್ದು ಚಿತ್ರಮಂದಿರಗಳಲ್ಲಿ ಬಾಡಿಗೆ ನಿಯಮವಿದೆ. ಇದರಿಂದ ನಿರ್ಮಾಪಕರಿಗೆ ತುಂಬಾ ನಷ್ಟವಾಗ್ತಿದೆ. ಆದ್ದರಿಂದ ಸಿಂಗಲ್ ಸ್ಕ್ರೀನ್‌ಗಳಲ್ಲಿ ಶೇಕಡಾವಾರು ಪದ್ಧತಿ ಅಳವಡಿಕೆಗೆ ಚಿಂತನೆ ಮಾಡಿರುವುದಾಗಿ ನಿರ್ಮಾಪಕರ ಸಂಘ ಹೇಳಿದೆ.

ABOUT THE AUTHOR

...view details