ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ರೇಮೋ. ಈ ಸಿನಿಮಾ ಚಿತ್ರೀಕರಣಕ್ಕೆ ಹಲವಾರು ದಿನಗಳಿಂದ ಲೊಕೇಶನ್ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ.
ಕರ್ನಾಟಕದ ಕೆಲವು ಕಡೆ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗುತ್ತದೆ ಎಂದು ನಿರ್ದೇಶಕರು ಕಳೆದ ಕೆಲವು ದಿನಗಳ ಹಿಂದೆಯೇ ಹೇಳಿದ್ದರು. ಇದೀಗ ಒಂದು ವಿಡೀಯೋವನ್ನು ಶೇರ್ ಮಾಡುವ ಮೂಲಕ ಹೊಸ ಜಾಗವನ್ನು ಹುಡುಕಿರುವುದಾಗಿ ಹೇಳಿದ್ದಾರೆ.
ರೇಮೋ ಸಿನಿಮಾ ಚಿತ್ರೀಕರಣವನ್ನು ಸಿಂಗಪೂರ್, ಮಲೇಷಿಯಾ ಮತ್ತು ಬ್ಯಾಂಕಾಕ್ಗಳಲ್ಲಿ ಮಾಡಲಾಗುತ್ತಿದ್ದು, ಸದ್ಯ ಬ್ಯಾಂಕಾಕ್ನ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಪವನ್ ಒಡೆಯರ್ ಸ್ಥಳದ ವಿಡಿಯೋ ಮಾಡಿ ಈ ಸ್ಥಳದಲ್ಲಿಯೇ ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇವರ ಜೊತೆ ಶೂಟಿಂಗ್ ಪ್ಲೇಸ್ ನೋಡಲು ಛಾಯಚಿತ್ರ ನಿರ್ದೇಶಕರು, ಸಿನಿಮಾ ಸಹ ನಿರ್ದೇಶಕ ಗುರು ಹಾಗೂ ಬಾಬು ಹೋಗಿದ್ದಾರೆ.
ರೇಮೋ ಸಿನಿಮಾದಲ್ಲಿ ಇಶಾನ್ ಮತ್ತು ಆಶಿಕಾ ರಂಗನಾಥ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.