'ಲೈಫು ಇಷ್ಟೇನೆ', 'ಲೂಸಿಯಾ' ಹಾಗು 'ಯೂಟರ್ನ್' ಸಿನಿಮಾಗಳಿಂದ ಸ್ಯಾಂಡಲ್ ವುಡ್ನಲ್ಲಿ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರೋ ನಟ, ನಿರ್ದೇಶಕ ಪವನ್ ಕುಮಾರ್ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಗಾಳಿಪಟ-2 ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಪವನ್ ಕುಮಾರ್ ತಮ್ಮ ಪಾತ್ರಕ್ಕಾಗಿ ಭರ್ಜರಿ ತಾಲೀಮು ಮಾಡುತ್ತಿದ್ದು, ನಿನ್ನೆಯಷ್ಟೇ 37ನೇ ವಸಂತಕ್ಕೆ ಕಾಲಿಟ್ಟ ಪವನ್ ಕುಮಾರ್ ತಮ್ಮ ಫೇಸ್ ಬುಕ್ನಲ್ಲಿ ಸ್ಪೆಷಲ್ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಬಾಕ್ಸಿಂಗ್ ಕಲೆಗಳಲ್ಲಿ ಒಂದಾಗಿರೋ ಮುಯೆ ಥಾಯ್ ಬಾಕ್ಸಿಂಗ್ ಕಲಿಯುತ್ತಿರುವ ದೃಶ್ಯ ಕಂಡು ಬಂದಿದೆ.