ಕರ್ನಾಟಕ

karnataka

ETV Bharat / sitara

ಚಿತ್ರರಂಗದ ಬಗ್ಗೆ ಪವನ್ ಕುಮಾರ್ ಮಾಡಿರುವ ಯೋಜನೆ ವರ್ಕೌಟ್ ಆಗುತ್ತಾ..? - Film United club

ಕೊರೊನಾ ಲಾಕ್​​​ಡೌನ್​​ನಿಂದ ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಗಿದೆ. ಈಗ ಚಿತ್ರರಂಗ ಮತ್ತೆ ಮೊದಲಿನ ಸ್ಥಿತಿಗೆ ಬರಲು ಸಾಕಷ್ಟು ಸಮಯ ಬೇಕು. ಈ ಸಂಬಂಧ ಪವನ್ ಕುಮಾರ್ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಒಂದು ಹೊಸ ಐಡಿಯಾ ಮಾಡಿದ್ದಾರೆ.

Pawan kumar
ಪವನ್ ಕುಮಾರ್

By

Published : Jun 8, 2020, 5:06 PM IST

ಕೊರೊನಾ ಲಾಕ್​​​ಡೌನ್ ಸಮಯದಲ್ಲಿ ಹಾಡುಗಳು, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದವರೇ ಹೆಚ್ಚಾಗಿದ್ದು ಈ ಸಮಯದಲ್ಲಿ ಚಿತ್ರರಂಗ ಹೇಗೆ ಗಟ್ಟಿಯಾಗಬೇಕು ಎಂದು ಯಾರೂ ಚಿಂತನೆ ಮಾಡಿಲಿಲ್ಲ. ಆದರೆ ಈ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಒಂದು ಹೊಸ ಪ್ಲ್ಯಾನ್ ಮಾಡಿದ್ದಾರೆ.

ಕ್ರೌಡ್​ ಫಂಡಿಂಗ್​ ಮೂಲಕ 'ಲೂಸಿಯಾ' ಚಿತ್ರವನ್ನು ಹೇಗೆ ಮಾಡಿದರೋ ಅದೇ ರೀತಿ ಪವನ್ ಕುಮಾರ್ ಕ್ರೌಂಡ್ ಫಂಡ್ ಸಂಗ್ರಹಿಸಿ ನೂರಾರು ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಅದೇ ಪವನ್ ಕುಮಾರ್​​​​​ ಚಿತ್ರರಂಗಕ್ಕೆ ಹೊಸ ಯೋಜನೆಯನ್ನು ಮುಂದಿಟ್ಟಿದ್ದಾರೆ.

ಚಿತ್ರ ನಿರ್ಮಾತೃಗಳು ಈಗ ಫಿಲ್ಮ್​ ಯುನೈಟೆಡ್ ಕ್ಲಬ್ (ಎಫ್​​​​​​​​​​​​​​​​​​​​​​​​​​​​ಯುಸಿ) ಎಂಬ ವೇದಿಕೆಯನ್ನು ಹುಟ್ಟುಹಾಕಿದ್ದಾರೆ. ಇದರ ಅಡಿಯಲ್ಲಿ ಖ್ಯಾತ ನಿರ್ದೇಶಕರು, ನಿರ್ಮಾಪಕರು , ಅಭಿಮಾನಿಗಳು ಚಿತ್ರಗಳು ಮತ್ತು ಪ್ರದರ್ಶನದ ಬಗ್ಗೆ ಸಂವಾದ ನಡೆಸಲಿದ್ದಾರೆ. ಈ ಚರ್ಚೆ ಮೂಲಕ ನಿರ್ದೇಶಕರು ಹಾಗೂ ಪ್ರೇಕ್ಷಕರು ಹತ್ತಿರ ಆಗುತ್ತಾರೆ. ಮತ್ತೆ ಥಿಯೇಟರ್​​​ಗೆ ಬಂದು ಸಿನಿಮಾ ನೋಡುವವರು ಹೆಚ್ಚಾಗುತ್ತಾರೆ. ಈ ವೇದಿಕೆಯಿಂದ ಸಿನಿಮಾ ನಿರ್ಮಾಣಕ್ಕೆ ಬೇಕಾದ ಹಣ ಸಹ ಸಂಗ್ರಹ ಕೂಡಾ ಮಾಡಬಹುದು.

ಕ್ಲಬ್ ಸದಸ್ಯರಿಗೆ ಉತ್ತಮ ವಿಚಾರಗಳು ಇಲ್ಲಿ ಸಿಗಲಿದೆ. ಸಿನಿಮಾ ವಿಶ್ಲೇಷಣೆ, ವಿಮರ್ಶೆ, ನಿರ್ದೇಶಕರ ಸಂದರ್ಶನ, ಸಿನಿಮಾ ಇತಿಹಾಸ ಹಲವಾರು ವಿಚಾರಗಳು ಸಿಕ್ಕಂತೆ ಆಗುತ್ತದೆ. ಈ ಕ್ಲಬ್​​​ ಮೂಲಕ ಸಿನಿಮಾ ಆಸಕ್ತರು ಒಂದು ಕಡೆ ಸೇರಿದಂತೆ ಆಗುತ್ತದೆ. ಹೊಸ ವಿಚಾರ, ಆವಿಷ್ಕಾರಗಳ ಬಗ್ಗೆ ಚರ್ಚೆ, ಕಲಿಕೆಯು ಯೂಟ್ಯೂಬ್ ಚಾನಲ್, ವೆಬ್​​​ಸೈಟ್ ಮತ್ತು ಸೋಷಿಯಲ್​ ಮೀಡಿಯಾದಲ್ಲಿ ದೊರೆಯಲಿದೆ ಎಂದು ಪವನ್ ಕುಮಾರ್ ಪ್ಲ್ಯಾನ್ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಯೋಚಿಸಿ ರೂಪುರೇಷೆಗಳನ್ನು ಸಿದ್ಧ ಮಾಡಿದ್ದಾರೆ. ಇದು ಯಾವ ರೀತಿ ಜಾರಿಗೆ ಬರಲಿದೆ ಕಾದುನೋಡಬೇಕು.

ABOUT THE AUTHOR

...view details